1:25 AM Saturday 24 - January 2026

ವ್ಯಕ್ತಿಯ ಒಳ ಉಡುಪು ಕಂಡು ಬೆಚ್ಚಿಬಿದ್ದ ಅಧಿಕಾರಿಗಳು | ಅಷ್ಟಕ್ಕೂ ಒಳ ಉಡುಪಿನೊಳಗೆ ಇದ್ದದ್ದೇನು ಗೊತ್ತಾ?

13/03/2021

ಮಂಗಳೂರು: ಮಂಗಳೂರು ಏರ್ ಪೋರ್ಟ್ ಅಧಿಕಾರಿಗಳು ವ್ಯಕ್ತಿಯೋರ್ವನನ್ನು  ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಬಂಧಿಸಿದ್ದು, ಮಾರ್ಚ್ 13ರಂದು ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳದ ಕೊಪ್ಪಾ ಮೂಲದ 45 ವರ್ಷ ವಯಸ್ಸಿನ ಮಮ್ಮಿಲಿ ಖಾಲಿದ್  ಬಂಧಿತ ಆರೋಪಿಯಾಗಿದ್ದು, ದುಬೈನಿಂದ ಆಗಮಿಸಿದ ಏರ್ ಇಂಡಿಯಾ ವಿಮಾನದಲ್ಲಿ ಬಂದ ಈತ ವಿಶೇಷವಾಗಿ ತಯಾರಿಸಲಾಗಿದ್ದ ಒಳ ಉಡುಪಿನಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದ. ಇದನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

33,75,470 ಮೌಲ್ಯದ 737 ಗ್ರಾಂ ತೂಕದ ಚಿನ್ನವನ್ನು ಆರೋಪಿಯಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.  ಐಆರ್ ಎಸ್  ಡೆಪ್ಯುಟಿ ಕಮಿಷನರ್ ಅವಿನಾಶ್ ಕಿರಣ ರೊಂಗಾಲಿ, ಭೊಮ್ಕಾರ್, ರಾಕೇಶ್ ಕುಮಾರ್ ಹಾಗೂ ವಿಕ್ರಮ್ ಚಕ್ರವರ್ತಿ ಸೇರಿದಂತೆ ಹಲವು ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಇತ್ತೀಚಿನ ಸುದ್ದಿ

Exit mobile version