9:01 AM Wednesday 10 - December 2025

ಸಂಸದ ಸ್ಥಾನದಿಂದ ಉಚ್ಛಾಟನೆ: ನೈತಿಕ ಸಮಿತಿ ವಿರುದ್ಧ ವಾಗ್ದಾಳಿ ನಡೆಸಿದ ಮಹುವಾ ಮೊಯಿತ್ರಾ

09/12/2023

‘ಪ್ರಶ್ನೆಗಾಗಿ ಹಣ’ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯಿಂದ ಸದನದ ಸದಸ್ಯ ಸ್ಥಾನದಿಂದ ಹೊರಹಾಕಲ್ಪಟ್ಟ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಹುವಾ ಮೊಯಿತ್ರಾ ಅವರು ನೈತಿಕ ಸಮಿತಿಯು ಪ್ರತಿಪಕ್ಷಗಳ ವಿರುದ್ಧ ಅಸ್ತ್ರ ಪ್ರಯೋಗಿಸುವ ಬುಲ್ಡೋಜರ್ ಎಂದು ಕಿಡಿಕಾರಿದ್ದಾರೆ.

ಸಂಸದ ಸ್ಥಾನದಿಂದ ಹೊರಹಾಕಲ್ಪಟ್ಟ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೊಯಿತ್ರಾ, ನೈತಿಕ ಸಮಿತಿ ಮತ್ತು ಅದರ ವರದಿಯು ಪುಸ್ತಕದಲ್ಲಿನ ಪ್ರತಿಯೊಂದು ನಿಯಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದರು. ಇವರನ್ನು ಉಚ್ಚಾಟಿಸಲು ಶಿಫಾರಸು ಮಾಡಿದ ನೈತಿಕ ಸಮಿತಿಯ ವರದಿಯನ್ನು ಲೋಕಸಭೆ ಇಂದು ಕೈಗೆತ್ತಿಕೊಂಡ ನಂತರ ಈ ಬೆಳವಣಿಗೆ ಸಂಭವಿಸಿದೆ.

ಲೋಕಸಭೆಯು ಸಂಸದೀಯ ಸಮಿತಿಯ ಅಸ್ತ್ರೀಕರಣವನ್ನು ಕಂಡಿದೆ. ವಿಪರ್ಯಾಸವೆಂದರೆ, ಸದಸ್ಯರಿಗೆ ನೈತಿಕ ದಿಕ್ಸೂಚಿಯಾಗಿ ಸ್ಥಾಪಿಸಲಾದ ನೈತಿಕ ಸಮಿತಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ. ಪ್ರತಿಪಕ್ಷಗಳನ್ನು ನಿಯಂತ್ರಿಸಲಾಗುತ್ತಿದೆ ಮತ್ತು ನಮ್ಮನ್ನು ಶರಣಾಗುವಂತೆ ಮಾಡಲು ಮತ್ತೊಂದು ಅಸ್ತ್ರವಾಗಿ ಮಾರ್ಪಡಿಸಲಾಗುತ್ತಿದೆ” ಎಂದು ಟಿಎಂಸಿ ನಾಯಕ ಆರೋಪಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version