ಛೇ… ಇದೆಂಥಾ ದುರಂತ: ಎರಡು ವರ್ಷಗಳ ಹಿಂದೆ ಪತ್ನಿ– ಮಗು ಸಾವು, ಈಗ ಪತಿಯೂ ಹೃದಯಾಘಾತದಿಂದ ಸಾವು!

Irfan
04/11/2024

ಚಿಕ್ಕಮಗಳೂರು: ಹೃದಯಾಘಾತ(Heart Attack)ದಿಂದ  ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೂಡಿಗೆರೆ ಸಮೀಪದ ಕಿತ್ತಲೆಗಂಡಿ ಗ್ರಾಮದ ಇರ್ಫಾನ್(30 ವರ್ಷ) ಭಾನುವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕಿತ್ತಲೆಗಂಡಿ ಗ್ರಾಮದ ಸುಲೇಮಾನ್ ಎಂಬುವವರ ಪುತ್ರ ಇರ್ಫಾನ್ ಮೂಡಿಗೆರೆ(Mudigere)ಯ ಜಂಜಂ ಟಿಂಬರ್ಸ್ ಕಂಪನಿಯಲ್ಲಿ ಲಾರಿ ಡ್ರೈವರ್ ಆಗಿದ್ದರು. ದೆಹಲಿಗೆ ಲಾರಿ ಲೋಡ್  ಕೊಂಡೊಯ್ದು ವಾಪಾಸ್ಸು ಬೆಂಗಳೂರಿಗೆ ಬಂದಿದ್ದರು. ಬೆಂಗಳೂರು ಸಮೀಪದಲ್ಲಿ ಕ್ಯಾಂಟೀನ್ ಒಂದರಲ್ಲಿ ಉಪಹಾರಕ್ಕೆ ನಿಲ್ಲಿಸಿದ್ದ  ಸಂದರ್ಭದಲ್ಲಿ ಇರ್ಫಾನ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ಯುಲು ಮುಂದಾಗಿದ್ದು, ಅಷ್ಟರಲ್ಲಾಗಲೇ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.

ಇರ್ಫಾನ್ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದು, ಎರಡು ವರ್ಷದ ಹಿಂದೆ ಅವರ ಪತ್ನಿ ಹೆರಿಗೆಯ ವೇಳೆ ಮಗು ಸಹಿತ ಸಾವನ್ನಪ್ಪಿದ್ದರು. ಇರ್ಫಾನ್ ತಂದೆ ತಾಯಿಗೆ ಏಕೈಕ ಪುತ್ರರಾಗಿದ್ದು, ಮೂವರು ಸಹೋದರಿಯರಿದ್ದರು.

ಇರ್ಫಾನ್ ಅವರ ಸಾವಿನ ಸುದ್ದಿ ಕೇಳಿ ಕುಟುಂಬದವರು, ಸಂಬಂಧಿಕರು, ಸ್ನೇಹಿತರು ತೀವ್ರ ದುಃಖಿತರಾಗಿದ್ದಾರೆ.  ಭಾನುವಾರ ಸಂಜೆ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಕಿತ್ತಲೆಗಂಡಿಯಲ್ಲಿ ಬಾರೀ ಸಂಖ್ಯೆಯಲ್ಲಿ ಸ್ನೇಹಿತರು, ಸಂಬಂಧಿಕರು, ಗ್ರಾಮಸ್ಥರು ಸೇರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version