2:52 PM Wednesday 20 - August 2025

ಜಿಮ್ ನಲ್ಲಿ ವರ್ಕೌಟ್ ಆರಂಭಿಸಲು ಸರಿಯಾದ ವಯಸ್ಸು ಎಷ್ಟು?

gum
27/01/2024

ಸಣ್ಣ ವಯಸ್ಸಿನಿಂದಲೇ ಬಾಡಿ ಬಿಲ್ಡ್ ಮಾಡಲು ಈಗಿನ ಯುವ ಜನತೆ ಬಯಸ್ತಾರೆ. ಆದ್ರೆ, ಜಿಮ್ ನಲ್ಲಿ ವ್ಯಾಯಾಮ ಮಾಡಲು ಎಷ್ಟು ವರ್ಷ ವಯಸ್ಸು ಆಗಬೇಕು, ಯಾವ ವಯಸ್ಸಿನಿಂದ ಬಾಡಿ ಬಿಲ್ಡ್ ಆರಂಭಿಸಬಹುದು ಎನ್ನುವುದು ಸಾಕಷ್ಟು ಜನರಿಗೆ ತಿಳಿದಿಲ್ಲ.

ಹುಡುಗರು ಮಾತ್ರವಲ್ಲದೇ ಹುಡುಗಿಯರು ಕೂಡ ಝೀರೋ ಫಿಗರ್ ಜೊತೆಗೆ ಫುಲ್ ಸ್ಲಿಮ್ ಆಗಿರಲು ವರ್ಕೌಟ್ ಮಾಡುತ್ತಾರೆ. ಬಾಡಿ ಬಿಲ್ಡ್ ಮಾಡುವುದು ತಪ್ಪಲ್ಲ ಆದರೆ, ಚಿಕ್ಕ ವಯಸ್ಸಿನಲ್ಲೇ ಜಿಮ್ ಗೆ ಹೋಗುವುದು ಅಪಾಯಕಾರಿಯಾಗಬಹುದು ಅಂತ ತಜ್ಞರು ಹೇಳುತ್ತಾರೆ.

15ರಿಂದ 17 ವರ್ಷ ಅಂದರೆ ಹದಿಹರೆಯದಲ್ಲಿ ಭಾರೀ ವರ್ಕೌಟ್ ಮಾಡಬಾರದು ಅಂತ ತಜ್ಞರು ಹೇಳುತ್ತಾರೆ. ಈ ವಯಸ್ಸಿನಲ್ಲಿ ದೇಹ ಮತ್ತು ಸ್ನಾಯುಗಳ ಬೆಳವಣಿಗೆ ಪೂರ್ಣವಾಗಿರುವುದಿಲ್ಲ. ಹೀಗಾಗಿ ಅಧಿಕ ತೂಕ ಎತ್ತುವುದು, ಕಠಿಣ ವ್ಯಾಯಾಮ ಸ್ನಾಯುಗಳು ಮತ್ತು ಮೂಳೆಗಳಿಗೆ ಹಾನಿಯುಂಟು ಮಾಡಬಹುದು.

18ರಿಂದ 20 ವರ್ಷ ವಯಸ್ಸಿನ ನಂತರ ಜಿಮ್ ಗೆ ಸೇರುವುದು ಸರಿಯಾದ ವಯಸ್ಸಾಗಿದೆ. ಏಕೆಂದರೆ ಈ ವಯಸ್ಸಿನಲ್ಲಿ ದೇಹದ ಬೆಳವಣಿಗೆ ಪೂರ್ಣಗೊಂಡಿರುತ್ತದೆ. 18 ವರ್ಷದ ನಂತರ ಜಿಮ್ ಗೆ ಸೇರಿ ನಿಮ್ಮ ಫಿಟ್ನೆಸ್ ಮಟ್ಟವನ್ನು ಹೆಚ್ಚಿಸಬಹುದು.

ಇತ್ತೀಚಿನ ಸುದ್ದಿ

Exit mobile version