ವೀಲ್ ಚೇರ್ ಇಲ್ಲವೇ ಇಲ್ಲ: ಮುಂಬೈ ಏರ್ ಪೋರ್ಟ್ ನಲ್ಲಿ 1 ಕಿ.ಮೀ ದೂರ ನಡೆದುಕೊಂಡು ಹೋದ ಏರ್ ಇಂಡಿಯಾ ಪ್ರಯಾಣಿಕ ಹೃದಯಾಘಾತದಿಂದ ಸಾವು

16/02/2024

ಮುಂಬೈ: ನ್ಯೂಯಾರ್ಕ್‌ನಿಂದ ಮುಂಬೈಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ವೀಲ್ ಚೇರ್ ಸಹಾಯಕ್ಕಾಗಿ ವಿನಂತಿಸಿದ್ದ ಹಿರಿಯ ನಾಗರಿಕ ಪ್ರಯಾಣಿಕರೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇವರು ತನ್ನ ಹೆಂಡತಿಯೊಂದಿಗೆ ಬರುತ್ತಿರುವಾಗ ಈ ಘಟನೆ ಸಂಭವಿಸಿದೆ.

“ನ್ಯೂಯಾರ್ಕ್ ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ನಮ್ಮ ಪ್ರಯಾಣಿಕರೊಬ್ಬರು ಗಾಲಿಕುರ್ಚಿಯನ್ನು ಬಯಸಿದ್ದರು. ವೀಲ್ ಚೇರ್ ಗೆ ಭಾರಿ ಬೇಡಿಕೆ ಇದ್ದ ಕಾರಣ ಇವರಿಗೆ ವೀಲ್ ಚೇರ್ ಸಹಾಯವನ್ನು ಒದಗಿಸುವವರೆಗೆ ಕಾಯುವಂತೆ ನಾವು ವಿನಂತಿಸಿದ್ದೇವು. ಆದರೆ ಅವರು ತಮ್ಮ ಪತ್ನಿ ಜೊತೆಗೆ ನಡೆಯಲು ಮುಂದಾದರು. ಅಸ್ವಸ್ಥಗೊಂಡ ನಂತರ ಅವರಿಗೆ ಚಿಕಿತ್ಸೆ ನೀಡುತ್ತಿರುವ ವಿಮಾನ ನಿಲ್ದಾಣದ ವೈದ್ಯರ ಸಲಹೆಯಂತೆ, ಪ್ರಯಾಣಿಕನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ನಿಧನರಾದರು ಎಂದು ಘೋಷಿಸಲಾಯಿತು ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ಕಾಯ್ದಿರಿಸುವ ಸಮಯದಲ್ಲಿ ವೀಲ್ ಚೇರ್ ಸಹಾಯವನ್ನು ಕೋರುವ ಪ್ರತಿಯೊಬ್ಬ ಪ್ರಯಾಣಿಕರಿಗೆ ವೀಲ್ ಚೇರ್ ಸಹಾಯವನ್ನು ನೀಡಲು ಏರ್ ಇಂಡಿಯಾ ಸ್ಪಷ್ಟವಾಗಿ ನಿಗದಿಪಡಿಸಿದ ನೀತಿಯನ್ನು ಹೊಂದಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version