ಪತಿ ಸ್ನಾನಕ್ಕೆ ಹೋದಾಗ ಬಾತ್ ರೂಮ್ ಗೆ ಬೀಗ ಹಾಕಿ ಪತ್ನಿ ಪರಾರಿ

20/08/2023
ಬೆಂಗಳೂರು: ಪತಿಯನ್ನು ಸ್ನಾನದ ರೂಮಿನೊಳಗೆ ಬಿಟ್ಟು ಹೊರಗೆ ಚಿಲಕ ಬೀಗ ಹಾಕಿಕೊಂಡು ಹೆಂಡತಿಯೊಬ್ಬಳು ಪರಾರಿಯಾಗಿರುವ ಘಟನೆ ನಡೆದಿದೆ
ಕಳೆದ ಎರಡು ತಿಂಗಳ ಹಿಂದೆಯಷ್ಟೇ ಪತಿ ರಮೇಶ್ ಮದುವೆಯಾಗಿದ್ದ. ಪತಿ ರಮೇಶ್ ಜೊತೆಗೆ ಚೆನ್ನಾಗಿಯೇ ಇದ್ದ ಪತ್ನಿ, ಇದೇ ಆಗಸ್ಟ್ 12ರಂದು ಬೆಳಗ್ಗೆ ಪತಿ ರಮೇಶ್ ನನ್ನ ಸ್ನಾನ ಮಾಡುವಂತೆ ಬಾತ್ ರೂಮ್ ಗೆ ಕಳುಹಿಸಿದ್ದಾಳೆ. ಪತಿ ಒಳಗೆ ಹೋದ ತಕ್ಷಣ ಪತ್ನಿ ಹೊರಗಿನಿಂದ ಬಾಗಿಲು ಚಿಲಕ ಬೀಗ ಹಾಕಿ ಪತ್ನಿ ಪರಾರಿಯಾಗಿದ್ದಾಳೆ.
ಈ ಬಗ್ಗೆ ಪತಿ ರಮೇಶ್ ಆರ್.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪತ್ನಿ ತನ್ನ ಸ್ನೇಹಿತ ಕಾರ್ತಿಕ್ ಜೊತೆಗೆ ಹೋಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ರಮೇಶ್ ನ ಪತ್ನಿಗಾಗಿ ಹುಡುಕಾಟ ನಡೆಸಿದ್ದಾರೆ.