ಪೂಜೆ ಮುಗಿಸಿ ಬರುತ್ತಿದ್ದ ಯುವಕರ ಮೇಲೆ ಆನೆ ದಾಳಿ: ಓರ್ವನ ದಾರುಣ ಸಾವು

elephant
20/08/2023

ಚಾಮರಾಜನಗರ:  ಮಲೈಮಹದೇಶ್ವರನಿಗೆ ಪೂಜೆ ಸಲ್ಲಿಸಿ  ನಾಗಮಲೈ ಗೆ‌ ಹೋಗುವ ವೇಳೆ  ಆನೆ ದಾಳಿಗೆ ಯುವಕನೋರ್ವ ಬಲಿಯಾಗಿದ್ದು, ಮತ್ತೋರ್ವ ಆನೆ ದಾಳಿಯಿಂದ ಪಾರಾಗಿದ್ದಾನೆ.

ಚಾಮರಾಜನಗರ ಜಿಲ್ಲೆ ಮಲೈಮಹದೇಶ್ವರ ಬೆಟ್ಟದ ಅರಣ್ಯ‌ ಪ್ರದೇಶದಲ್ಲಿ ಘಟನೆ ನಡೆದಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಬೆಂಗಳೂರು ಮೂಲದ ಗೋವಿಂದರಾಜು ಮತ್ತು ಆತನ ಗೆಳೆಯ ಲೋಕೇಶ್ ಆಗಮಿಸಿದ್ದರು. ಮಹದೇಶ್ವರ ಬೆಟ್ಟಕ್ಕೆ ಬಂದು ಮಹದೇಶ್ವರನ ಸನ್ನಿಧಿಯಲ್ಲಿ ಪೂಜೆ ಮುಗಿಸಿ ನಾಗಮಲೈಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.

ತಡರಾತ್ರಿ 11:30ರ ವೇಳೆಗೆ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಇಂಡಿಗನತ್ತ ಹತ್ತಿರವಿರುವ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿ ಆನೆ ದಾಳಿ ನಡೆಸಿದ್ದು,  ಗೋವಿಂದರಾಜು ಎಂಬ ವ್ಯಕ್ತಿ ಆನೆ ತುಳಿಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಲೋಕೇಶ್ ಸ್ಥಳದಿಂದ ಓಡಿ ಬೆಳಗ್ಗಿನ ವೇಳೆ ಅರಣ್ಯದಿಂದ ಹೊರ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಸ್ಥಳಕ್ಕೆ ಮಲೈಮಹದೇಶ್ವರ  ಬೆಟ್ಟದ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ರಾತ್ರಿ ವೇಳೆ ನಾಗಮಲೈ‌ ಹಾಗೂ ಬೆಟ್ಟದ ಮಾರ್ಗಮಧ್ಯ ಹಾಗಾಗ ದಾಳಿ ನಡೆಸುತ್ತಿದೆ. ಹಾಗಾಗಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version