ಎಲ್ಲ ಕಾಮುಕರು ಯಾಕೆ ನಿಮ್ಮ ಪಾರ್ಟಿಗೆ ಸೇರುತ್ತಿದ್ದಾರೆ?: ಪ್ರಕಾಶ್ ರಾಜ್ ಪ್ರಶ್ನೆ

ಗದಗ: ಬಿಜ್ ಭೂಷಣ್ ನಿಂದ ಹಿಡಿದು ಪ್ರಜ್ವಲ್ ವರೆಗೆ ಎಲ್ಲ ಕಾಮುಕರು ಯಾಕೆ ನಿಮ್ಮ ಪಾರ್ಟಿ ಗೆ ಸೇರುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಿತ್ರ ನಟ ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ.
ಗದಗನಲ್ಲಿ ನಡೆದ ಪ್ರಕಾಶ್ ರಾಜ್ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಜ್ವಲ್ ರೇವಣ್ಣ ರಾಸಲೀಲೆ ವಿಚಾರದ ಬಗ್ಗೆ ಪ್ರಸ್ತಾಪಿಸಿ, ಪ್ರಧಾನಿ ಮೋದಿ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ತರಾಟೆಗೆತ್ತಿಕೊಂಡರು.
ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತನಾಡಿದ ಪ್ರಕಾಶ್ ರಾಜ್, ನನಗೂ ಅವನಿಗೂ ನನಗೂ ಸಂಬಂಧ ಇಲ್ಲ.. ಅಣ್ಣನ ಮಗ ಅಂತಾ ಕುಮಾರಸ್ವಾಮಿ ಹೇಳ್ತಾರೆ.. ವೇದಿಕೆ ಮೇಲೆ ಇವ ಮಗ ಇದ್ದಂಗ ಅಂತಾ ಹೇಳಿದ್ದು ನಾವ್ ಕೇಳಿಸಿಕೊಂಡಿಲ್ಲನ..? ಎಂದು ಪ್ರಶ್ನಿಸಿದರು.
ಯಾವುದೋ ಸರ್ಕಾರ ಬಂದೇತಿ ಹೆಣ್ ಮಕ್ಕಳಿಗೆ ಉಚಿತ ಬಸ್ ಕೊಟ್ಟಾರ.. ಉಚಿತ ಬಸ್ ತುಗೊಂಡು ಹೆಣಮಕ್ಕಳು ದಾರಿ ತಪ್ಪಾರನ..? ಹೆಣಮಕ್ಕಳು ದಾರಿ ತಪ್ಪೋದು ಅಂದ್ರ ಹಳ್ಳಿಯೊಳಗ ಏನ್ ಅರ್ಥ ಗೊತ್ತನ ಆ ಮನುಷ್ಯನಿಗೆ? ಎಂದು ಪ್ರಶ್ನಿಸಿದ ಅವರು, ಸರಿನಪ್ಪ ಹೆಣ್ಣಮಕ್ಕಳುದಾರಿ ತಪ್ಪಿದ್ರು.. ನಿನ್ ಮನಿ ಮಗ ದಾರಿ ತಪ್ಪಿದ್ನಲ್ಲ.. ಅವಾ ಎಲ್ಲದಾನ್ ಹೇಳು.. ಎಂದು ಪ್ರಶ್ನಿಸಿದರು.
ಕಲ್ಯಾಣ ಕರ್ನಾಟಕಕ್ಕೆ ಮೋದಿ ಬಂದಿದ್ರು.. ನಾವು ಕಾಯಕದ ಕಲ್ಯಾಣ ಅಂತೇವಿ.. ಅವ್ರು ಕಾವಿ ಕಲ್ಯಾಣ ಮಾಡಾಕ್ ಬಂದಾನ.. ಅಲ್ಲಿ ಬಂದು ನೇಹಾ ಪ್ರಕರಣ ಮಾತಾಡ್ತಾನ.. ನೇಹಾ ಪ್ರಕರಣ ನಮಗ ಎದಿ ಚುರ್ ಅನ್ನೋದಿಲ್ಲೇರ್ರಿ.. ನೇಹಾ, ಅದಕ್ಕೂ ಮುಂಚೆ ಒಂದು ಮುಸ್ಲಿಂ ಹೆಣ್ಣುಮಗಳು ಹತ್ ಕೇಸ್ ನಡೆದಾವು. ಅಜದಲ್ಲಿ ಯಾಕೆ ಈ ದೌರ್ಜನ್ಯ ನಡ್ಯಾಕತ್ತೇತಿ ಅಂತಾ ಯೋಚ್ನೆ ಮಾಡ್ಬೇಕು.. ಅದು ಬಿಟ್ಟು ಅದ್ಕೊಂದು ಜಾತಿ, ಧರ್ಮದ ಲೇಪನ ಹಾಕ್ತಿನ..? ಹೆಣದ ಮೇಲೆ ರಾಜಕೀಯ ಮಾಡ್ತೀನ ಎಂದು ಪ್ರಶ್ನಿಸಿದರು.
ಬಿಜೆಪಿ ಮಹಿಳಾ ಸದಸ್ಯರಿಗೆ ಕೇಳ್ತೇನಿ.. ಅವ್ನು ಯಾವ್ನಾದ್ರೂ ಇರ್ಲಿ ವಿಕೃತ ಕಾಮುಕ.. ಅಶ್ಲೀಲ ಚಿತ್ರ ಅಲ್ಲ.. ವಿಕೃತ ಕಾಮ.., ಎರಡು ಸಾವಿರ ಹೆಣ್ಣು ಮಕ್ಕಳ ಕಾಣೋದಿಲ್ಲನ ನಿಮಗ? ಅವ್ರು ಹಿಂದೂಗಳಲ್ಲೇನು.. ಅದ್ರ ಬಗ್ಗೆ ಪ್ರತಿಭಟನೆ ಮಾಡೋದಿಲ್ಲ ನೀವು..? ನಾವು ಯೋಚ್ನೆ ಮಾಡದಿದ್ರೆ ಎಲ್ಲ ರಾಜಕೀಯ ಪಕ್ಷಗಳು ನಮ್ಮನ್ನ ಮಂಗನ್ನ ಮಾಡೋದು.. ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296