ಉದಯ್ ಜೈನ್ ನ್ನು ವಿಚಾರಣೆಗೆ ಕರೆದಿದ್ದೇಕೆ?: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದೇನು?

ಬೆಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ತಂಡ ಉದಯ್ ಜೈನ್ ನ್ನು ವಿಚಾರಣೆಗೆ ಕರೆದ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಯಾವ ಆಧಾರದಲ್ಲಿ ಉದಯ್ ಜೈನ್ ನ್ನು ವಿಚಾರಣೆಗೆ ಕರೆಯಲಾಯ್ತು? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗೆ ಏನು ಮಾಹಿತಿ ಸಿಕ್ಕಿದ್ಯೋ ನನಗೆ ಗೊತ್ತಿಲ್ಲ, ಒಂದೊಂದು ತನಿಖೆಯಲ್ಲಿ ಕೂಡ ಬೇಕಾದಷ್ಟು ವಿಚಾರಗಳನ್ನ ಅವರು ಕಲೆ ಹಾಕಬೇಕಾಗುತ್ತೆ, ಎಲ್ಲಿಯಾದ್ರು ಕೂಡ ಅವರಿಗೆ ಮಾಹಿತಿ ಕೊಡುವವರು ಏನು ಕೊಟ್ಟಿದ್ದಾರೋ, ಆ ಕಾರಣಕ್ಕಾಗಿ ಕರೆದಿರಬಹುದು ಎಂದರು.
ಅದನ್ನ ಅವರಲ್ಲಿ(ಎಸ್ ಐಟಿ) ಚರ್ಚೆ ಮಾಡಿ, ಕೇಳ್ಕೊಂಡೇ ನಾನು ಹೇಳ ಬೇಕಾಗುತ್ತೆ, ಆದ್ರೆ ನಾವು ಈಗ್ಲೇ ಬಹಿರಂಗಪಡಿಸುವುದಕ್ಕೆ ಆಗೋದಿಲ್ಲ, ಲಿಂಕ್ ಇದ್ದಾಗ ಅದನ್ನು ವಿಚಾರಣೆ ಮಾಡದಿದ್ದರೆ, ತನಿಖೆ ಪೂರ್ಣ ಆಗೋದಿಲ್ಲ ಅಂತ ಹೇಳಿದರು.
ಮರು ತನಿಖೆಗೆ ಸುಪ್ರೀಂ ಕೋರ್ಟ್ ಅನುಮತಿ ಬೇಕಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನ ಅವರು ತನಿಖೆ ಮಾಡ್ತಾ ಇಲ್ಲ, ಕ್ರಾಸ್ ರೆಫ್ರೆನ್ಸ್ ನಲ್ಲಿ ಯಾವ ಮಾಹಿತಿಯನ್ನು, ಯಾರು ತನಿಖೆ ಮಾಡ್ತಾ ಇರುವಾಗ ಕೊಟ್ಟಿದ್ದಾರೆ ಗೊತ್ತಿಲ್ಲ, ಅದರದ್ದು ಎಕ್ಸಾಮಿನ್ ಮಾಡಬೇಕಲ್ಲ ಎಂದರು.
ಸೌಜನ್ಯ ಪ್ರಕರಣದ ಮರು ತನಿಖೆ ಅಂತ ನಾನು ಹೇಳೋಕೆ ಹೋಗುವುದಿಲ್ಲ, ಯಾವ ಲಿಂಕ್ ನಿಂದ ಅವರು ತನಿಖೆ ಮಾಡುತ್ತಿದ್ದಾರೆ ಅನ್ನೋದು ಆಮೇಲೆ ಗೊತ್ತಾಗುತ್ತೆ ಎಂದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD