ಹಣಕಾಸಿನ ವಿಚಾರಕ್ಕೆ ಜಗಳ: ತಲೆಗೆ ಹೊಡೆದು ಪತ್ನಿಯ ಬರ್ಬರ ಹತ್ಯೆ

chamarajanagara
22/10/2023

ಚಾಮರಾಜನಗರ: ಹಣಕಾಸಿನ ವಿಚಾರಕ್ಕೆ ಗಂಡ–ಹೆಂಡತಿ ನಡುವೆ ಜಗಳ ನಡೆದಿದ್ದು, ಈ ವೇಳೆ ಬಲವಾದ ಆಯುಧದಿಂದ ತಲೆಗೆ ಹೊಡೆದು ಹೆಂಡತಿಯನ್ನು ಪತಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಾಮರಾಜನಗರ ತಾಲ್ಲೂಕು ಮಂಗಲ ಹೊಸೂರು ಗ್ರಾಮದಲ್ಲಿ ನಡೆದಿದೆ.

ತಮಿಳುನಾಡು ಮೂಲದ ರಾಧಿಕಾ (22) ಮೃತಪಟ್ಟ ಮಹಿಳೆ. ಪತಿ ಕಾರ್ತಿಕ್ ಎಂಬಾತ ತನ್ನ ಪತ್ನಿಯನ್ನೇ ಹತ್ಯೆಮಾಡಿದ ಆರೋಪಿಯಾಗಿದ್ದಾನೆ.

ಈ ದಂಪತಿಗೆ 10 ತಿಂಗಳ ಹೆಣ್ಣು ಮಗುವಿದೆ. ಮಂಗಲ ಹೊಸೂರು ಗ್ರಾಮದಲ್ಲಿ ಜಮೀನನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡುತ್ತಿದ್ದ ಈ ದಂಪತಿ, ಹಣಕಾಸಿನ ವಿಚಾರವಾಗಿ ರಾತ್ರಿ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಕೋಪದಲ್ಲಿ ಗಂಡ ಯಾವುದೋ ಆಯುಧದಿಂದ ಹೆಂಡತಿಯ ತಲೆಗೆ ಹೊಡೆದಿದ್ದಾನೆ.

ಸದ್ಯ ಆರೋಪಿ ಕಾರ್ತಿಕ್ ನನ್ನು ಸಂತೇಮರಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿವೈಎಸ್ಪಿ ಲಕ್ಷ್ಮಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಬಸವರಾಜ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version