6:06 PM Thursday 16 - October 2025

ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕ ಕ್ರಿಯೆಗೆ ಒತ್ತಾಯ: ಪತ್ನಿಯಿಂದ ಪತಿಯ ಹತ್ಯೆ

police
01/10/2025

ಕೊಪ್ಪಳ:  ಅಶ್ಲೀಲ ಚಿತ್ರ ತೋರಿಸಿ, ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಪತಿಯನ್ನು ಮಹಿಳೆಯೊಬ್ಬರು ಹತ್ಯೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ ನಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಮಹಾದೇವಿ ಎಂಬ ಮಹಿಳೆ ತನ್ನ ಪತಿ ರಮೇಶ್(51) ಎಂಬಾತನನ್ನು ಹತ್ಯೆ ಮಾಡಿದ್ದು,  ಕುಡಿತದ ಮತ್ತಿನಲ್ಲಿ ಪತಿ ಅಶ್ಲೀಲ ವಿಡಿಯೋ ತೋರಿಸಿ ಅದರಂತೆ ಲೈಂಗಿಕ ಕ್ರಿಯೆ ನಡೆಸಲು ಒತ್ತಡ ಹೇರಿದ್ದಾನೆನ್ನಲಾಗಿದೆ. ಈ ವಿಷಯಕ್ಕೆ ಜಗಳ ನಡೆದು, ವಿಕೋಪಕ್ಕೆ ತಿರುಗಿದೆ.

ಮಹಾದೇವಿ ಕೋಪದಲ್ಲಿ ಗಂಡನ ತಲೆಗೆ ಲಟ್ಟಣಿಗೆಯಿಂದ ಥಳಿಸಿದ್ದಾಳೆ. ಪರಿಣಾಮವಾಗಿ ಕುಸಿದು ಬಿದ್ದ ರಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಘಟನೆಯ ನಂತರ  ಆರೋಪಿ ಮಹಾದೇವಿ ಮುನಿರಾಬಾದ್ ಪೊಲೀಸರಿಗೆ ಶರಣಾಗಿದ್ದು, ಲೈಂಗಿಕ ಕಿರುಕುಳ ಮತ್ತು ಆರ್ಥಿಕ ದೌರ್ಜನ್ಯದಿಂದ ಬೇಸತ್ತು ಕೃತ್ಯ ನಡೆಸಿರುವುದಾಗಿ ಪೊಲೀಸರಿಗೆ ತಿಳಿಸಿರುವುದಾ ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version