8:46 PM Sunday 28 - September 2025

ಯೂಟ್ಯೂಬ್ ನೋಡಿ ಗಂಡನ ಕಿವಿಗೆ ವಿಷ ಸುರಿದು ಹತ್ಯೆ ಮಾಡಿದ ಪತ್ನಿ!

crime
08/08/2025

ತೆಲಂಗಾಣ: ಪ್ರಿಯಕರನ ಜೊತೆ ಸೇರಿ ಮಹಿಳೆಯೊಬ್ಬಳು ತನ್ನ ಕುಡುಕ ಪತಿಯ ಕಿವಿಗೆ ವಿಷ ಸುರಿದು ಹತ್ಯೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಸಂಪತ್ ಎಂಬಾತ ಹತ್ಯೆಗೀಡಾದ ವ್ಯಕ್ತಿಯಾಗಿದ್ದು, ಈತ ಗ್ರಂಥಾಲಯದಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಮದ್ಯ ವ್ಯಸನಿಯಾಗಿದ್ದ ಈತ ಕುಟುಂಬವನ್ನು ಪಾಲನೆ ಮಾಡುವಲ್ಲಿ ವಿಫಲವಾಗಿದ್ದ. ಪತ್ನಿ ರಮಾದೇವಿ ತಿಂಡಿ ಅಂಗಡಿಯಲ್ಲಿ ಕೆಲಸ ಮಾಡಿ ಆ ದುಡ್ಡಿನಲ್ಲಿ ತನ್ನ ಕುಟುಂಬವನ್ನು ಸಾಕುತ್ತಿದ್ದಳು. ಇದೇ ಸಂದರ್ಭದಲ್ಲಿ ಆಕೆಗೆ 50 ವರ್ಷದ ಕರಣ್ ರಾಜಯ್ಯ ಎಂಬಾತನ ಪರಿಚಯವಾಗಿತ್ತು, ಬೇಜವಾಬ್ದಾರಿಯ ಗಂಡನಿಂದ ಬೇಸತ್ತಿದ್ದ ರಮಾದೇವಿಗೆ ರಾಜಯ್ಯನ ಪರಿಚಯ ಜೀವನದಲ್ಲಿ ಹೊಸ ತಿರುವಿಗೆ ಕಾರಣವಾಯ್ತು, ಅವರಿಬ್ಬರ ನಡುವೆ ಪ್ರೀತಿ ಮೂಡಿತ್ತು.

ಇತ್ತ ತಾನು ರಾಜಯ್ಯನ ಜೊತೆಗೆ ಬದುಕಬೇಕಾದರೆ, ತನ್ನ ಪತಿ ಸಂಪತ್ ಅಡ್ಡವಾಗುತ್ತಿದ್ದ. ಹೀಗಾಗಿ ಗಂಡನನ್ನು ಕೊಲ್ಲಲು ಯೂಟ್ಯೂಬ್ ನಲ್ಲಿ ಪ್ಲಾನ್ ಹುಡುಕಾಡಿದ್ದಾಲೆ. ಈ ವೇಳೆ ಕಿವಿಗೆ ಕೀಟನಾಶಕ ಸುರಿಯುವ ಪ್ಲಾನ್ ಸಿಕ್ಕಿದೆ. ಅಂತೆಯೇ ಪ್ರಿಯಕರ ರಾಜಯ್ಯನಿಗೆ ಈ ಪ್ಲಾನ್ ನೀಡಿದ ರಮಾದೇವಿ, ಆತನಿಂದ ಕೀಟನಾಶಕ ತರಿಸಿದ್ದಳು.

ಅತ್ತ ಸಂಪತ್ ಕಂಠಮಟ್ಟ ಕುಡಿದು ಮೈಮೇಲೆ ಪ್ರಜ್ಞೆಯೇ ಇಲ್ಲದೇ ಮಲಗಿದ್ದ ವೇಳೆ ರಮಾದೇವಿಯ ಪ್ರಿಯಕರ  ರಾಜಯ್ಯ, ಆತನ ಕಿವಿಗೆ ವಿಷ ಸುರಿದಿದ್ದಾನೆ. ಹೀಗಾಗಿ ಸಂಪತ್ ಸಾವನ್ನಪ್ಪಿದ್ದ. ಮರುದಿನ  ರಮಾದೇವಿ, ತನ್ನ ಗಂಡ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದಳು. ಆ.1ರಂದು ಸಂಪತ್ ನ ಶವ ಪತ್ತೆಯಾಗಿತ್ತು.

ಈ ವೇಳೆ ಮರಣೋತ್ತರ ಪರೀಕ್ಷೆ ಮಾಡುವುದು ಬೇಡ ಎಂದು ರಮಾದೇವಿ ಮತ್ತು ರಾಜಯ್ಯ ಪಟ್ಟು ಹಿಡಿಸಿದ್ದರು. ಇದರಿಂದಾಘಿ ಪೊಲೀಸರಿಗೆ ಅನುಮಾನ ಬಂದಿತ್ತು. ಈ ಸಂದರ್ಭದಲ್ಲಿ ರಮಾದೇವಿಯ ಮಗ ತಂದೆಯ ಸಾವನ್ನು ಅನುಮಾನಿಸಿದ್ದ. ತನಿಖೆ ನಡೆಸಿದ ವೇಳೆ ನಿಜಾಂಶ ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version