ಪುತ್ತೂರು ಪೇಟೆಯಲ್ಲಿ ಪ್ರತ್ಯಕ್ಷಗೊಂಡ ಕಾಡುಕೋಣಗಳು: ಸಾರ್ವಜನಿಕರಲ್ಲಿ ಆತಂಕ
ಪುತ್ತೂರು: ಇದುವರೆಗೆ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತಿದ್ದ ಕಾಡುಕೋಣಗಳು ಇದೀಗ ನೇರವಾಗಿ ಪುತ್ತೂರು ಪೇಟೆಯೊಳಗೆ ಲಗ್ಗೆ ಇಡುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಪುತ್ತೂರು ಬೈಪಾಸ್ ರಸ್ತೆಯ ದುರ್ಗಮ್ಮ-ದೇರಣ್ಣ ಹಾಲ್ ಸಮೀಪ ಸೆಪ್ಟೆಂಬರ್ 11ರ ನಸುಕಿನ ಜಾವ ರಸ್ತೆಯಲ್ಲೇ ಎರಡು ಕಾಡುಕೋಣಗಳು ಪ್ರತ್ಯಕ್ಷಗೊಂಡಿವೆ. ಮುಂಜಾನೆಯ ವೇಳೆ ರಸ್ತೆಯಲ್ಲಿ ಕಾಡುಕೋಣಗಳು ನಿಂತಿರುವುದನ್ನು ಕಂಡ ಸ್ಥಳೀಯರು, ಸಾರ್ವಜನಿಕರು ಹಾಗೂ ವಾಹನ ಸವಾರರು ಕೆಲಕಾಲ ಆತಂಕಕ್ಕೊಳಗಾದರು. ಜನವಸತಿ ಹಾಗೂ ವ್ಯಾಪಾರೀ ಪ್ರದೇಶದ ಒಳಗೆ ಕಾಡುಕೋಣಗಳು ಬಂದಿರುವುದು ಜನಸಾಮಾನ್ಯರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಅರಣ್ಯ ಪ್ರದೇಶ ನಾಶ ಹಾಗೂ ಆಹಾರ–ನೀರಿನ ಹುಡುಕಾಟದಲ್ಲಿ ಕಾಡುಕೋಣಗಳು ಕಾಡಿನಂಚಿನ ಜನವಸತಿ ಪ್ರದೇಶಗಳತ್ತ ಬರುತ್ತಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಗಮನಹರಿಸಿ, ಪ್ರಾಣಿಗಳು ಜನಸಂದಣಿ ಪ್ರದೇಶಕ್ಕೆ ಬಾರದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಹಾಗೂ ವಾಹನ ಸವಾರರು ಬಲವಾಗಿ ಆಗ್ರಹಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























