ಮಹಿಳೆಯ ವೇಷ ಧರಿಸಿ ಪುರುಷರನ್ನು ಆಹ್ವಾನಿಸುತ್ತಾನೆ: ವೈದ್ಯನ ವಿರುದ್ಧ ಪತ್ನಿಯಿಂದಲೇ ಗಂಭೀರ ಆರೋಪ

dr varunesh dubey
24/05/2025

ಲಕ್ನೋ: ಸರ್ಕಾರಿ ವೈದ್ಯರೊಬ್ಬರು ಮಹಿಳೆಯಂತೆ ವೇಷ ಧರಿಸಿ ಇತರ ಪುರುಷರೊಂದಿಗೆ ಲೈಂಗಿಕತೆಯ ಅಶ್ಲೀಲ ವಿಡಿಯೋಗಳನ್ನು ಮಾಡಿ ಪೋರ್ನ್ ವೆಬ್ ಸೈಟ್ ಗಳಿಗೆ ಅಪ್ ಲೋಡ್ ಮಾಡಿರುವ ಬಗ್ಗೆ ಅವರ ಪತ್ನಿಯೇ ಗಂಭೀರ ಆರೋಪ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಸಂತ್ ಕಬೀರ್ ನಗರದ ಜಿಲ್ಲಾ ಸಮುದಾಯ ಆರೋಗ್ಯ ಕೇಂದ್ರದ ಮೇಲ್ವಿಚಾರಕರಾಗಿರುವ ಡಾ.ವರುಣೇಶ್ ದುಬೆ ವಿರುದ್ಧ ಪತ್ನಿ ಸಿಂಪಿ ಪಾಂಡೆ ಈ ಗಂಭೀರ ಆರೋಪ ಮಾಡಿದ್ದು, ಸರ್ಕಾರಿ ಕಟ್ಟಡವನ್ನು ದುರುಪಯೋಗಪಡಿಸಿಕೊಂಡು ಡಾ.ದುಬೆ ಪೋರ್ನ್ ವಿಡಿಯೋಗಳನ್ನು ಮಾಡಿ ವೆಬ್ ಸೈಟ್ ಗಳಿಗೆ ಅಪ್ ಲೋಡ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪತ್ನಿಯನ್ನು ತನ್ನ ಗೋರಖ್ ಪುರದ ಮನೆಯಲ್ಲಿ ಬಿಟ್ಟು, ತಾನು ಕೆಲಸ ಮಾಡುತ್ತಿರುವ ಸರ್ಕಾರಿ ವಸತಿ ಕಟ್ಟಡದಲ್ಲಿ ಡಾ.ದುಬೆ ಈ ಅಶ್ಲೀಲ ಕೆಲಸವನ್ನು ಮಾಡುತ್ತಿದ್ದರು. ವಿಡಿಯೋ ಮಾಡಿದ ಬಳಿಕ ವಿಡಿಯೋವನ್ನು ವೆಬ್ ಸೈಟ್ ಗಳಿಗೆ ಅಪ್ ಲೋಡ್ ಮಾಡಿ ಹಣ ಗಳಿಕೆ ಮಾಡುತ್ತಿದ್ದರು ಎಂದು ಪತ್ನಿ ಆರೋಪಿಸಿದ್ದಾರೆ. ವೈದ್ಯರ ಪತ್ನಿ ನೀಡಿದ ದೂರಿನನ್ವಯ ಪೊಲೀಸರು ವೈದ್ಯರ ಮನೆ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪತಿ ತಾನು ಟ್ರಾನ್ಸ್ ಜೆಂಡರ್ ಎಂದು ಹೇಳಿಕೊಳ್ಳುತ್ತಾನೆ. ಪುರುಷರನ್ನು ಮನೆಗೆ ಕರೆಸಿಕೊಂಡು ಅಶ್ಲೀಲತೆಯಲ್ಲಿ ತೊಡಗುತ್ತಾನೆ. ಬಳಿಕ ಆ ವಿಡಿಯೋವನ್ನು ವೆಬ್ ಸೈಟ್ ಗಳಲ್ಲಿ ಅಪ್ ಲೋಡ್ ಮಾಡುತ್ತಾನೆ ಎಂದು ಪತ್ನಿ ದೂರಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇನ್ನೂ ಪತ್ನಿಯ ಆರೋಪಗಳನ್ನು ಡಾ.ವರುಣೇಶ್ ದುಬೆ, ಪತ್ನಿಯ ಆರೋಪಗಳು ಸುಳ್ಳು, ಆಕೆ ಆಸ್ತಿಗಾಗಿ ಹೀಗೆ ಆರೋಪ ಮಾಡಿದ್ದಾಳೆ. ನನ್ನ ತಂದೆಯನ್ನು ಮಾನಸಿಕವಾಗಿ ಹಿಂಸಿಸಿದ್ದಾಳೆ, ಮಗುವನ್ನು ಬಾಲ್ಕನಿಯಿಂದ ಎಸೆಯುವುದಾಗಿ ಬೆದರಿಕೆ ಹಾಕಿದ್ದಾಳೆ. ಇದೀಗ ಡೀಪ್ ಫೇಕ್ ವಿಡಿಯೋ ತಯಾರಿಸಿ ನನ್ನ ತೇಜೋವಧೆಗೆ ಯತ್ನಿಸಿದ್ದಾಳೆ ಎಂದು ಆರೋಪಿಸಿದ್ದು, ಇದರ ವಿರುದ್ಧ ನಾನು ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version