ತನ್ನ ಪತಿಯ ಪ್ರಯಾಣಕ್ಕೆ ಹೆಲಿಕಾಫ್ಟರ್ ಖರೀದಿಸಲು ಸಾಲ ನೀಡಿ | ರಾಷ್ಟ್ರಪತಿಗೆ ಪತ್ರ ಬರೆದ ಬಡ ಮಹಿಳೆ
ಭೋಪಾಲ್: ಹೆಲಿಕಾಫ್ಟರ್ ಖರೀದಿಸಲು ಸಾಲ ನೀಡಿ ಮತ್ತು ಅದರ ಹಾರಾಟಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಮಹಿಳೆಯೊಬ್ಬರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.
ತಮ್ಮ ಜಮೀನಿಗೆ ಹೋಗುವ ಮಾರ್ಗವನ್ನು ವ್ಯಕ್ತಿಯೋರ್ವ ಹಾಗೂ ಆತನ ಮಕ್ಕಳು ಸೇರಿ ತಡೆ ಹಿಡಿದಿದ್ದಾರೆ. ಹಾಗಾಗಿ ತನ್ನ ಜಮೀನಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಬೇರೆ ದಾರಿ ಕೂಡ ಇಲ್ಲ. ಹಾಗಾಗಿ ತನ್ನ ಪತಿಯನ್ನು ಹೆಲಿಕಾಫ್ಟರ್ ನಲ್ಲಿ ಕಳುಹಿಸುತ್ತೇನೆ. ದಯವಿಟ್ಟು ಅನುಮತಿ ನೀಡಿ ಎಂದು ಪ್ರತಿಭಟನಾ ರೂಪದ ಪತ್ರವನ್ನು ಅವರು ರಾಷ್ಟ್ರಪತಿಗೆ ಬರೆದಿದ್ದಾರೆ.
ರಾಮಕರಣ್ ಲೋಹರ್ ಎಂಬವರ ಪತ್ನಿ ಬಸಂತಿ ಅವರು ಈ ಪ್ರತಿಭಟನಾ ರೂಪದ ಪತ್ರವನ್ನು ಬರೆದಿದ್ದು, ನಾವು ಹಲವಾರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಈಗಾಗಲೇ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಹಾಗಾಗಿ ರಾಷ್ಟ್ರಪತಿಗೆ ಪತ್ರ ಬರೆಯುತ್ತಿದ್ದೇವೆ ಎಂದು ಬಸಂತಿ ಹೇಳಿದ್ದಾರೆ.
ಬಸಂತಿ ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಪರಮಾನಂದ್ ಪಾಟೀದಾರ್ ಮತ್ತು ಆತನ ಮಕ್ಕಳಾದ ಲವ ಮತ್ತು ಖುಷ ಈಡ ದಂಪತಿಯ ಭೂಮಿಗೆ ಹೋಗುವ ದಾರಿಯನ್ನು ಬಂದ್ ಮಾಡಿದ್ದಾರೆ.ಹೀಗಾಗಿ ತನ್ನ ಜಮೀನಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.























