ಬಿಗಿ ಕ್ಷೇತ್ರ ರಕ್ಷಣೆ ಮೂಲಕ ಹೆಚ್ಚಿನ ಸ್ಕೋರ್‌ ಗಳಿಸದಂತೆ ಕಟ್ಟಿ ಹಾಕಿದ ಆಸ್ಟ್ರೇಲಿಯಾ

world cup
19/11/2023

ಭಾರತ ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯ ತೀವ್ರ ಕುತೂಹಲ ಸೃಷ್ಟಿಸಿದೆ. ಎರಡು ಬಲಿಷ್ಠ ತಂಡಗಳ ಗುದ್ದಾಟವನ್ನು ವಿಶ್ವ ನೋಡುತ್ತಿದೆ.

ಒಂದೆಡೆ 3 ವಿಕೆಟ್ ಗಳನ್ನು ಕಳೆದುಕೊಂಡಿರುವ ಟೀಮ್‌ ಇಂಡಿಯಾ 121 ರನ್‌ ಗಳಿಸಿದ್ದು, ಇದೀಗ ಕೆ.ಎಲ್.ರಾಹುಲ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಬಹಳ ಚಾಕಚಕ್ಯತೆಯಿಂದ ಆಟವಾಡುತ್ತಿದ್ದಾರೆ.

ಆಸ್ಟ್ರೇಲಿಯಾ ತಂಡವು ಬಿಗಿ ಕ್ಷೇತ್ರ ರಕ್ಷಣೆಯ ಮೂಲಕ ಟೀಮ್‌ ಇಂಡಿಯಾವನ್ನು ಹೆಚ್ಚಿನ ರನ್‌ ಗಳಿಸದಂತೆ ಕಟ್ಟಿ ಹಾಕಲು ಮುಂದಾಗಿದೆ. ಆಸ್ಟ್ರೇಲಿಯಾ ತಂಡದ ಬಿಗಿ ಕ್ಷೇತ್ರ ರಕ್ಷಣೆಯಿಂದಾಗಿ ಹೆಚ್ಚಿನ ರನ್‌ ಗಳಿಸಲು  ಸಾಧ್ಯವಾಗುತ್ತಿಲ್ಲ. ಸಿಂಗಲ್‌ ರನ್‌ ಗಳೇ ಹೆಚ್ಚಾಗಿದ್ದು, 22 ಓವರ್‌ ಗಳಾದರೂ ಸಿಕ್ಸ್‌ ಫೋರ್‌ ಗಳ ಪತ್ತೆಯೇ ಇಲ್ಲವಾಗಿದೆ.

ವಿರಾಟ್ ಕೊಹ್ಲಿ 46  ಎಸೆತಗಳಲ್ಲಿ 42 ರನ್ ಗಳಿಸಿದ್ದಾರೆ. ಕೆ.ಎಲ್.ರಾಹುಲ್ 46 ಎಸೆತಗಳಲ್ಲಿ 22 ರನ್ ಗಳಿಸಿದ್ದಾರೆ. ಒಟ್ಟಿನಲ್ಲಿ ಸದ್ಯ 3 ವಿಕೆಟ್ ಗಳ ನಷ್ಟಕ್ಕೆ ಭಾರತ 121ರನ್ ಗಳಿಸಿದೆ.

ಇತ್ತೀಚಿನ ಸುದ್ದಿ

Exit mobile version