ಇಸ್ಲಾಮ್ ಫೋಬಿಯಾದ ವಿರುದ್ಧ ಜಗತ್ತು ಒಂದಾಗಬೇಕು: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕರೆ

27/03/2024

ಮುಸ್ಲಿಮರು ಹಿಂಸೆ, ದೌರ್ಜನ್ಯ, ಬಹಿಷ್ಕಾರ ಮತ್ತು ವ್ಯವಸ್ಥಿತ ತುಳಿತಕ್ಕೆ ಒಳಗಾಗುತ್ತಿದ್ದು ಈ ಇಸ್ಲಾಮ್ ಫೋಬಿಯಾದ ವಿರುದ್ಧ ಜಗತ್ತು ಒಂದಾಗಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟನಿಯೋ ಗುಟ್ ರೆಸ್ ಕರೆ ನೀಡಿದ್ದಾರೆ.

ಇಸ್ಲಾಮನ್ನು ಭೀತಿಕಾರಕವಾಗಿ ಪ್ರಚುರಪಡಿಸುವ ವ್ಯವಸ್ಥಿತ ಯೋಜನೆಯು ಚಾಲ್ತಿಯಲ್ಲಿದ್ದು ಮುಸ್ಲಿಮರ ಕೊಡುಗೆಗಳನ್ನು ಮತ್ತು ಅವರ ಪ್ರತಿಭೆಗಳನ್ನು ನಿರಾಕರಿಸುವ ದಾಟಿಯ ಪ್ರಚಾರಗಳು ಸೋಶಿಯಲ್ ಮೀಡಿಯಾ ಸಹಿತ ಆನ್ಲೈನ್ ನಲ್ಲಿ ಪ್ರಚಾರದಲ್ಲಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತಾಡುತ್ತಾ ಗುಟರೆ ಸ್ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ವಿರೋಧಿ ಮತ್ತು ನಿಂದನೆಯ ಕೃತ್ಯಗಳು ಜಾಗತಿಕವಾಗಿ ಕಾಣಿಸುತ್ತಿದೆ. ಇದು ಬೇರೆ ಬೇರೆ ರೀತಿಯಲ್ಲಿ ವ್ಯಕ್ತವಾಗುತ್ತಿದೆ. ಅತ್ಯಂತ ಯೋಜಿತವಾಗಿ ಮತ್ತು ಬಿಡಿಬಿಡಿಯಾಗಿಯೂ ಈ ಕೃತ್ಯಗಳು ನಡೆಯುತ್ತಿವೆ.

ಸಾಮಾಜಿಕ ಆರ್ಥಿಕವಾಗಿ ಮುಸ್ಲಿಮರನ್ನು ಮುಖ್ಯ ವಾಹಿನಿಯಿಂದ ಹೊರ ತಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಹಾಗೆಯೇ ವ್ಯವಸ್ಥಿತ ರೂಪದಲ್ಲಿ ಸರ್ಕಾರಿ ನೆಲೆಯಲ್ಲಿಯೇ ಮುಸ್ಲಿಮರನ್ನು ಹೊರ ತಳ್ಳುವ ನೀತಿಗಳು ಪ್ರಕಟವಾಗುತ್ತಿವೆ. ಮುಖ್ಯವಾಗಿ ಪೌರತ್ವ ಶಿಕ್ಷಣ ಉದ್ಯೋಗ ಹಾಗೂ ನ್ಯಾಯ ಮುಂತಾದ ಕ್ಷೇತ್ರಗಳಲ್ಲಿ ಮುಸ್ಲಿಮರನ್ನು ವ್ಯವಸ್ಥಿತವಾಗಿ ತುಳಿಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ. ಆದರೆ ಯಾವುದೇ ರಾಷ್ಟ್ರದ ಹೆಸರನ್ನು ಅವರು ಉಲ್ಲೇಖಿಸಿಲ್ಲ. ಆದರೆ ಭಾರತವು ಸೇರಿದಂತೆ ವಿವಿಧ ರಾಷ್ಟ್ರಗಳು ಅವರ ಈ ಮಾತಿನ ಹಿನ್ನೆಲೆಯಲ್ಲಿ ಇದ್ದುವು ಎಂದು ವಿಶ್ಲೇಷಿಸಲಾಗುತ್ತಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version