ಮಂಗಳಮುಖಿಯರಿಗಾಗಿ ವಿಶ್ವದ ಪ್ರಪ್ರಥಮ ಮಸೀದಿ ಬಾಂಗ್ಲಾದೇಶದಲ್ಲಿ ಪ್ರಾರಂಭ

16/04/2024

ಮಂಗಳಮುಖಿಯರಿಗಾಗಿ ವಿಶ್ವದ ಪ್ರಪ್ರಥಮ ಮಸೀದಿ ಬಾಂಗ್ಲಾದೇಶದಲ್ಲಿ ಪ್ರಾರಂಭವಾಗಿದೆ. ಬ್ರಹ್ಮಪುತ್ರ ನದಿ ತೀರದಲ್ಲಿ ಸರಕಾರವೇ ನೀಡಿದ ಜಮೀನಿನಲ್ಲಿ ಈ ಮಸೀದಿಯನ್ನು ಸ್ಥಾಪಿಸಲಾಗಿದೆ. ಮಂಗಳಮುಖಿಯರಿಗೆ ಮಸೀದಿಯಲ್ಲಿ ಅವಕಾಶ ನೀಡಲಾಗಿಲ್ಲ ಮತ್ತು ಅವರನ್ನು ಹೊರಹಾಕಲಾಗಿದೆ ಎಂಬ ಆರೋಪದ ಬಳಿಕ ಈ ಬೆಳವಣಿಗೆ ನಡೆದಿದೆ.

ಈ ಮಸೀದಿಗೆ ದಕ್ಷಿಣ್ ಚಾರ್ ಖಾಲಿ ಬರಿ ಮಸ್ಜಿದ್ ಎಂದು ಹೆಸರಿಸಲಾಗಿದೆ. ಹಾಗೆಯೇ ಈ ಮಸೀದಿಯ ಪಕ್ಕದಲ್ಲಿ ಮೃತ ಶರೀರವನ್ನು ದಫನ ಮಾಡಲು ಭೂಮಿಯನ್ನು ಒದಗಿಸಲಾಗಿದೆ.

ಮಂಗಳಮುಖಿ ಸಮುದಾಯವು ಈ ಮಸೀದಿಗಾಗಿ ಚಂದದವನ್ನು ಎತ್ತಿತ್ತು. ತಮಗೆ ಮಸೀದಿಯಲ್ಲಿ ಪ್ರವೇಶ ನೀಡಲಾಗುತ್ತಿಲ್ಲ ಮತ್ತು ತಮ್ಮನ್ನು ಅಸಹಜವಾಗಿ ನೋಡಲಾಗುತ್ತಿದೆ ಎಂದು ಇವರು ಆರೋಪಿಸಿದ್ದರು. ಮಾತ್ರವಲ್ಲ, ನಾವು ನಮ್ಮ ಮನೆಯಲ್ಲಿ ನಮಾಜ್ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version