ಬೆತ್ತಲಾಗಿ ಆಸ್ಕರ್‌ ಅವಾರ್ಡ್‌ ಸ್ಟೇಜ್‌ ಗೆ ಎಂಟ್ರಿ ನೀಡಿದ ಜಾನ್‌ ಸೀನಾ!

john cena
11/03/2024

ಪ್ರತಿ ಬಾರಿಯೂ ಆಸ್ಕರ್‌ ಅವಾರ್ಡ್‌ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತವೆ. ಈ ಬಾರಿ WWE ಸೂಪರ್‌ ಸ್ಟಾರ್‌ ಹಾಲಿವುಡ್‌ ನಟ ಜಾನ್‌ ಸೀನಾ ಅವರು ಭಾರೀ ಸುದ್ದಿಯಾಗಿದ್ದಾರೆ.

ಅಮೆರಿಕದ ಲಾಸ್‌ ಏಂಜಲೀಸ್‌ ನ ಡಾಲ್ಬಿ ಥಿಯೇಟರ್‌ ನಲ್ಲಿ 96ನೇ ಸಾಲಿನ ಆಸ್ಕರ್‌ ಅವಾರ್ಡ್‌ ಕಾರ್ಯಕ್ರಮ ನಡೆಯುತ್ತಿದೆ. ಜಿಮ್ಮಿ ಕಿಮ್ಮೆಲ್‌ ಅವರು ಈ ಕಾರ್ಯಕ್ರಮವನ್ನು ಆಯೋಜನೆ ಮಾಡ್ತಾ ಇದ್ದಾರೆ. ಈ ಕಾರ್ಯಕ್ರಮಕ್ಕೆ ಜಾನ್‌ ಸೀನಾ ಅವರು ಬೆತ್ತಲೆಯಾಗಿ ಸ್ಟೇಜ್‌ ಗೆ ಎಂಟ್ರಿ ನೀಡಿದ್ದು, ಕ್ಷಣ ಕಾಲ ಅಭಿಮಾನಿಗಳು ದಂಗಾಗಿದ್ದಾರೆ.

ಗುಪ್ತಾಂಗಕ್ಕೆ ವಸ್ತುವೊಂದನ್ನು ಅಡ್ಡ ಇಟ್ಟುಕೊಂಡು ಬೆತ್ತಲಾಗಿ ಜಾನ್‌ ಸೀನಾ ವೇದಿಕೆ ಏರಿದ್ದಾರೆ. ʼಅತ್ಯುತ್ತಮ ಕಾಸ್ಟ್ಯೂಮ್‌ ಅವಾರ್ಡ್‌ʼ ನೀಡಲು ಜಾನ್‌ ಸೀನಾ ಅವರನ್ನು ಬೆತ್ತಲಾಗಿ ವೇದಿಕೆಗೆ ಬರುವಂತೆ ಕಾರ್ಯಕ್ರಮ ಆಯೋಜಕರು ಹೇಳಿದ್ದರಂತೆ, ಅಂತೆಯೇ ಜಾನ್‌ ಸೀನಾ ಬೆತ್ತಲಾಗಿ ವೇದಿಕೆ ಏರಿದ್ದಾರೆ.

ಇನ್ನೂ ಜಾನ್‌ ಸೀನಾ ಅವರ ಈ ಅವತಾರಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಇನ್ನಿತರರು ಮಿಶ್ರಪ್ರತಿಕ್ರಿಯೆ ನೀಡಿದ್ದಾರೆ. ಕಟ್ಟು ಮಸ್ತಾದ ದೇಹದ ಜಾನ್‌ ಸೀನಾ ಅವರು ಬೆತ್ತಲಾಗಿ ಸ್ಟೇಜ್‌ ಗೆ ಎಂಟ್ರಿ ನೀಡುವ ವಿಡಿಯೋ ಇದೀಗ ವೈರಲ್‌ ಆಗಿದೆ.

ಆಸ್ಕರ್‌ ಅವಾರ್ಡ್‌ ಕಾರ್ಯಕ್ರಮ ಅಂದರೆ, ಲಕ್ಷಾಂತರ ಮೌಲ್ಯದ ಬಟ್ಟೆಗಳನ್ನು ಧರಿಸಿ ವೇದಿಕೆ ಏರುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ರೆ ಜಾನ್‌ ಸೀನಾ ಅವರು ಬಟ್ಟೆಯೇ  ಇಲ್ಲದೇ ವೇದಿಕೆ ಏರಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version