10:04 PM Wednesday 10 - December 2025

“ಬಾಂಡ್‌ ಚೋರ್”‌ ಎಂಬ ಶೀರ್ಷಿಕೆಯ ಮೋದಿ ಚಿತ್ರ ತೆಗೆಯಿರಿ ಎಂದು ಎಕ್ಸ್ ಗೆ ಚುನಾವಣಾ ಆಯೋಗ ಸೂಚನೆ

18/04/2024

ಚುನಾವಣಾ ಆಯೋಗವು ಸಾಮಾಜಿಕ ಜಾಲತಾಣ ಎಕ್ಸ್‌ ಗೆ ಆಯ್ದ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಸೂಚಿಸಿದೆ. ಇದರಲ್ಲಿ “ಬಾಂಡ್‌ ಚೋರ್”‌ ಎಂಬ ಶೀರ್ಷಿಕೆಯ ಮೋದಿಯ ಚಿತ್ರವೂ ಸೇರಿದೆ. ಈ ಆದೇಶದಂತೆ ಪೋಸ್ಟ್‌ಗಳನ್ನು ತೆಗೆದು ಹಾಕಲಾಗಿದೆಯಾದರೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಅಗತ್ಯವಿರುವುದರಿಂದ ಈ ಕ್ರಮಗಳ ಬಗ್ಗೆ ನಾವು ಒಪ್ಪುವುದಿಲ್ಲ,” ಎಂದು ಎಕ್ಸ್‌ ಹೇಳಿದೆ.

ಆಪ್‌ ಮಾರ್ಚ್ 18ರಂದು ಪ್ರಧಾನಿ ನರೇಂದ್ರ ಮೋದಿಯ ತಿರುಚಲ್ಪಟ್ಟ ಚಿತ್ರವೊಂದನ್ನು ಪೋಸ್ಟ್‌ ಮಾಡಿ ಎಲೆಕ್ಟೋರಲ್‌ ಬಾಂಡ್‌ ಪ್ರಕರಣವನ್ನು ಉಲ್ಲೇಖಿಸಿ “ಬಾಂಡ್‌ ಚೋರ್”‌ ಎಂಬ ಶೀರ್ಷಿಕೆ ನೀಡಿತ್ತು.
ಬಿಜೆಪಿ ನಾಯಕ ಹಾಗೂ ಬಿಹಾರ ಡೆಪ್ಯುಟಿ ಸಿಎಂ ಸಾಮ್ರಾಟ್‌ ಚೌಧುರಿ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ರನ್ನು ಉಲ್ಲೇಖಿಸಿ “ಟಿಕೆಟ್‌ಗಳನ್ನು ಮಾರಾಟ ಮಾಡುವ ವಿಚಾರದಲ್ಲಿ ಅವರು ತಮ್ಮ ಪುತ್ರಿಯನ್ನೂ ಬಿಡದ ನಾಯಕರಾಗಿದ್ದಾರೆ,” ಎಂದು ವೀಡಿಯೋವೊಂದರಲ್ಲಿ ಹೇಳಿದ್ದರು.

ವಿಶಾಖಪಟ್ಟಣಂನಲ್ಲಿ ಮಾರ್ಚ್‌ 16ರಂದು ಡ್ರಗ್ಸ್‌ ಪ್ರಕರಣದ ಕುರಿತು ವೈಎಸ್ಸಾರ್‌ ಪಕ್ಷವು ಟಿಡಿಪಿಯನ್ನು ಟಾರ್ಗೆಟ್‌ ಮಾಡಿತ್ತು. “ಇಷ್ಟು ದಿನಗಳ ಕಾಲ ನಾವು ಟಿಡಿಪಿ ಎಂದರೆ ತೆಲುಗು ಡೊಂಗಲ ಅಂದರೆ ಕಳ್ಳರ ಪಕ್ಷ ಎಂದು ತಿಳಿದಿದ್ದೆವು. ಆದರೆ ಈ ಡ್ರಗ್ಸ್‌ ವಶಪಡಿಸಿಕೊಂಡ ಪ್ರಕರಣದ ನಂತರ ಅದು ತೆಲುಗು ಡ್ರಗ್ಸ್‌ ಪಾರ್ಟಿ ಎಂದು ತಿಳಿಯಿತು,” ಎಂದು ಟ್ವೀಟ್‌ ಮಾಡಿತ್ತು.

ಇದೇ ವಿಚಾರದಲ್ಲಿ ಚಂದ್ರಬಾಬು ನಾಯ್ಡು ರವರ ಟ್ವೀಟ್‌ ಕೂಡ ತೆಗೆದುಹಾಕಲೂ ಚುನಾವಣಾ ಆಯೋಗ ಸೂಚಿಸಿತ್ತು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version