ಯಡಿಯೂರಪ್ಪ ಹಿಂದೂ ಅಲ್ಲ: ಸಾಗರನಹಳ್ಳಿ ನಟರಾಜ್ ಹೇಳಿಕೆ!

yadiyurappa
10/11/2022

ತುಮಕೂರು: ಯಡಿಯೂರಪ್ಪ ಹಿಂದೂ ಅಲ್ಲ, ವೀರಶೈವ ಲಿಂಗಾಯತ. ಯಡಿಯೂರಪ್ಪ  ವೀರಶೈವ ಲಿಂಗಾಯತ ಆದ್ರೆ, ಅವರು ಹಿಂದೂ ಅಲ್ಲ ಎಂದು ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ್ ಹೇಳಿದರು.

ವೀರಶೈವ ಲಿಂಗಾಯತ ಮಹಾಸಭಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹಿಂದೂ ಅಲ್ಲ, ತಾನು ಹಿಂದೂ ಅಲ್ಲ ಅಂತ ಹೇಳೋದು ಬಿಡೋದು ಅವರ ವೈಯಕ್ತಿ ವಿಚಾರ. ಅವರು ಏನ್ ಬೇಕಾದ್ರೂ ಹೇಳಿಕೊಳ್ಳಲಿ ಎಂದು ಅವರು ಹೇಳಿದರು.

ನಮ್ಮಲ್ಲಿ 106 ಉಪ ಪಂಗಡಗಳಿವೆ, ಅವರೆಲ್ಲರೂ ವೀರಶೈವ ಲಿಂಗಾಯತರು. ಇವತ್ತಿನಿಂದ ಯಾರು ಲಿಂಗಾಧಾರಣೆ ಮಾಡುತ್ತಾರೋ ಅವರೆಲ್ಲರೂ ವೀರಶೈವ ಲಿಂಗಾಯತರು. ನಮ್ಮ ಬೈಲವನ್ನು ಒಪ್ಪಿ ಬರುವವರಿಗೆ ಸ್ವಾಗತ ಎಂದು ಅವರು ಹೇಳಿದರು.

ವೀರಶೈವ ಲಿಂಗಾಯತ ಅನ್ನೋದು ಪ್ರತ್ಯೇಕ ಧರ್ಮವಾಗಿದ್ದು, ಹಿಂದೂ ಧರ್ಮಕ್ಕೂ, ನಮ್ಮ ಆಚರಣೆಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಬೌದ್ಧ, ಸಿಖ್ ಧರ್ಮಗಳಂತೆಯೇ ನಮಗೂ ಪ್ರತ್ಯೇಕ ಧರ್ಮಕೊಡಿ ಎಂದು ಅವರು ಆಗ್ರಹಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version