11:09 AM Saturday 23 - August 2025

ಯೆನೆಪೊಯ-ಎಜೆ ಆಸ್ಪತ್ರೆ ಹಾಗೂ ಮಾಲಿಕರ ಮನೆ, ಕಚೇರಿಗಳ ಮೇಲೆ ಐಟಿ ದಾಳಿ

17/02/2021

ಮಂಗಳೂರು: ನಗರದ ಎರಡು ಪ್ರತಿಷ್ಠಿತ ಆಸ್ಪತ್ರೆಗಳ ಮಾಲಿಕರ ಮನೆ, ಆಸ್ಪತ್ರೆ ಕಚೇರಿಗಳ ಮೇಲೆ ಮಂಗಳೂರಿನ ಐಟಿ ಅಧಿಕಾರಿಗಳ ಆರು ಪ್ರತ್ಯೇಕ ತಂಡ ಬುಧವಾರ ಮುಂಜಾನೆ ಏಕಕಾಲದಲ್ಲಿ ದಾಳಿ ನಡೆಸಿದೆ.

 

ಎಜೆ ಆಸ್ಪತ್ರೆ ಮತ್ತು ಯೆನೆಪೊಯ ಆಸ್ಪತ್ರೆಗೆ ಹಾಗೂ ಅದರ ಮಾಲಕರ ಮನೆ ಮತ್ತು ಕಚೇರಿಗಳಿಗೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

ಐಟಿ ಅಧಿಕಾರಿಗಳ ಒಂದು ತಂಡ ಎಜೆ ಆಸ್ಪತ್ರೆಯ ಮಾಲಿಕರ ಮನೆಗೆ ಕೂಡ ದಾಳಿ ಮಾಡಿದೆ. ಹಾಗೆಯೇ ಯೆನಪೋಯ ಆಸ್ಪತ್ರೆ ಹಾಗೂ ಅದರ ಮಾಲಿಕರ ಮನೆಗೂ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

Exit mobile version