ಪ್ರೀತಿಸಿದ ಯುವತಿ ಕೈಕೊಟ್ಟಳೆಂದು ಸಾವಿಗೆ ಶರಣಾದ ಯುವಕ!

ಬೆಂಗಳೂರು: ಪ್ರೀತಿಸಿದ ಹುಡುಗಿ ಕೈಕೊಟ್ಟ ಕಾರಣಕ್ಕೆ ಯುವಕನೋರ್ವ ಸಾವಿಗೆ ಶರಣಾದ ಘಟನೆ ನಡೆದಿದೆ. ನವೀನ್ ಸಾವಿಗೆ ಶರಣಾದ ಯುವಕನಾಗಿದ್ದು, ಈತ ಮೂಲತಃ ಚಾಮರಾಜನಗರ ನಿವಾಸಿಯಾಗಿದ್ದಾನೆ.
ಬೆಂಗಳೂರಿನಲ್ಲಿ ನವೀನ್ ಕುಟುಂಬದವರು ಆತನ ಕೆಲಸಕ್ಕಾಗಿ ಬಾಳೆಕಾಯಿ ಮಂಡಿ ಹಾಕಿಕೊಟ್ಟಿದ್ದರು. ಈ ವೇಳೆ ನವೀನ್ ಹಾಗೂ ಯುವತಿಯೊಬ್ಬಳ ಮಧ್ಯೆ ಪ್ರೀತಿ ಅಂಕುರವಾಗಿ ವಿಷಯ ಮನೆಯವರಿಗೂ ತಿಳಿದು ಇದು ಮದುವೆವರೆಗೂ ಹೋಗಿತ್ತು.
ಈ ಮಧ್ಯೆ ಯುವತಿ ನವೀನ್ದ ನನ್ನು ನಿರ್ಲಕ್ಷಿಸಿದ್ದಳು. ಅಲ್ಲದೇ ಆಕೆ ಮತ್ತೊಬ್ಬ ಹುಡುಗನ ಜೊತೆಗೆ ಓಡಾಡುತ್ತಿದ್ದಾಳೆ ಎನ್ನುವ ವಿಚಾರ ತಿಳಿದು ನವೀನ್ ಬೇಸರಗೊಂಡು ತನ್ನ ಪ್ರೀತಿ ಯುವತಿಯ ಮೋಸ ಎಲ್ಲವನ್ನು ಡೆತ್ ನೋಟ್ ಬರೆದಿಟ್ಟು ಕೊನೆಯ ಬಾರಿ ಭಾನುವಾರ ಸಂಜೆ ಯುವತಿಗೆ ತಾನು ಸಾವಿನ ಮೊರೆ ಹೋಗುವುದಾಗಿ ಫೋನ್‌ಮಾಡಿ ತಿಳಿಸಿ ಸಾವಿಗೆ ಶರಣಾಗಿದ್ದಾನೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw