6:31 AM Saturday 24 - January 2026

ಬಸ್ಸಿನಲ್ಲೇ ನಿರ್ವಾಹಕಿಗೆ ಹಲ್ಲೆ ನಡೆಸಿದ ಯುವಕ !

conductor
21/02/2023

ಕೆಎಸ್ ಆರ್ ಟಿಸಿ ನಿರ್ವಾಹಕಿಗೆ ಯುವಕನೋರ್ವ ಬಸ್ ನಲ್ಲೇ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

ಮಂಗಳೂರು- ಪುತ್ತೂರು ಕೆಎಸ್ ಆರ್ ಟಿಸಿ ಬಸ್ ನಲ್ಲಿ ಕರ್ತವ್ಯ ನಿರತರಾಗಿದ್ದ ನಿರ್ವಾಹಕಿ ವಿಜಯ ಎಂಬುವವರಿಗೆ ಅದೇ ಬಸ್ ನಲ್ಲಿದ್ದ ಯುವಕ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಬಸ್ ಪುತ್ತೂರು ಬಸ್ ನಿಲ್ದಾಣದಿಂದ ಹೊರಟು ಬಸ್ ಮಾರುಕಟ್ಟೆ ಬಳಿಯ ತಂಗುದಾಣಕ್ಕೆ ತಲುಪಿದಾಗ ವಿಕಲಚೇತನ ವ್ಯಕ್ತಿ, ವೃದ್ದರೊಬ್ಬರು ಬಸ್ ಹತ್ತಿದ್ರು. ಹೀಗಾಗಿ ನಿರ್ವಾಹಕಿ ಬಸ್ ನಲ್ಲಿದ್ದ ಸೀಟು ಬಿಟ್ಟುಕೊಡುವಂತೆ ಕೇಳಿದಾಗ ಆಕ್ಷೇಪಿಸಿದ ಯುವಕ ಅವಾಚ್ಯ ಶಬ್ದದಿಂದ ಬೈದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಗಾಯಾಳು ನಿರ್ವಾಹಕಿ ವಿಜಯ ಅವರು ಪುತ್ತೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಈ ಬಗ್ಗೆ ಪುತ್ತೂರು ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version