ಹಣದ ವಿಚಾರಕ್ಕೆ ಜಗಳ: ಬಾಲ್ಯ ಸ್ನೇಹಿತನಿಂದಲೇ ಹತ್ಯೆಯಾದ ಯುವಕ

polices
25/06/2024

ಬೀದರ್: ಸ್ನೇಹಿತನೇ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೀದರ್ ತಾಲೂಕಿನ ಯಾಕತ್ ಪುರ್ ಗ್ರಾಮದಲ್ಲಿ ನಡೆದಿದೆ.

ಶಹಾಗಂಜ್ ನಿವಾಸಿ ಮೊಹಮ್ಮದ್ ಸಿರಾಜ್ ಹತ್ಯೆಯಾದ ವ್ಯಕ್ತಿ. ಯಾಸೀನ್ ಹತ್ಯೆಗೈದ ಆರೋಪಿಯಾಗಿದ್ದಾನೆ. ಇವರಿಬ್ಬರು ಬಾಲ್ಯ ಸ್ನೇಹಿತರಾಗಿದ್ದು, ಹಣಕಾಸಿನ ವಿಚಾರದಲ್ಲಿ ಗಲಾಟೆ ನಡೆದಿತ್ತು ಎನ್ನಲಾಗಿದೆ.

ಯಾಸೀನ್ ಗೆ 12 ಲಕ್ಷ ರೂಪಾಯಿ ಸಾಲ‌‌ವನ್ನು ಸಿರಾಜ್ ನೀಡಿದ್ದ ಎನ್ನಲಾಗಿದೆ. 12 ಲಕ್ಷ ರೂಪಾಯಿ ಸಾಲದಲ್ಲಿ 11 ಲಕ್ಷ ರೂಪಾಯಿ ಹಣವನ್ನು ಯಾಸೀನ್ ಮರಳಿ ನೀಡಿದ್ದ. ಇನ್ನುಳಿದ ಒಂದು ಲಕ್ಷ ರೂಪಾಯಿ ಬಾಕಿ ಹಣವನ್ನು ನೀಡುವಂತೆ ಸಿರಾಜ್ ಆಗಾಗ ಕೇಳುತ್ತಿದ್ದ ಎನ್ನಲಾಗಿದೆ.

ಇದರಿಂದ ಕೋಪಗೊಂಡ ಯಾಸೀನ್, ಹಣಕೊಡುವ ನೆಪದಲ್ಲಿ ಸಿರಾಜ್ ನನ್ನು ಕರೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಸುತ್ತಿಗೆಯಿಂದ ಸಿರಾಜ್ ನ ತಲೆಗೆ ಹೊಡೆದ ಯಾಸೀನ್ ನಂತರ ಕುತ್ತಿಕೆ ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬೀದರ್ ಜಿಲ್ಲೆಯ ಮನ್ನಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version