ಗೆಳೆಯನೊಂದಿಗೆ ಫ್ಲ್ಯಾಟ್ ನಲ್ಲಿದ್ದಾಗ ಬಾಗಿಲು ತಟ್ಟಿದ ತಂದೆ: 8ನೇ ಮಹಡಿಯಿಂದ ಹಾರಿದ ಯುವತಿ ಸಾವು
ಹೈದರಾಬಾದ್: ತಂದೆಗೆ ಸಿಕ್ಕಿಬೀಳುವ ಭಯದಿಂದ ಗೆಳೆಯನ ಜೊತೆ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಿಂದ ಕೆಳಕ್ಕೆ ಇಳಿಯಲು ಪ್ರಯತ್ನಿಸಿದ 22 ವರ್ಷದ ಯುವತಿಯೊಬ್ಬಳು ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಹೈದರಾಬಾದ್‌ನ ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಯುವತಿಯನ್ನು ಸಕೀನಾ ಬೇಗಂ ಎಂದು ಗುರುತಿಸಲಾಗಿದೆ. ಈಕೆ ತನ್ನ ತಂದೆಗೆ ಸೇರಿದ, ಯಾರೂ ವಾಸವಿರದ ಫ್ಲಾಟ್‌ಗೆ ತನ್ನ ಗೆಳೆಯ ಅಲಿ ಎಂಬಾತನ ಜೊತೆ ಬಂದಿದ್ದಳು. ಇವರು ಒಳಗಿದ್ದಾಗ ಆಕಸ್ಮಿಕವಾಗಿ ಆಕೆಯ ತಂದೆ ಅಲ್ಲಿಗೆ ಬಂದಿದ್ದಾರೆ. ಫ್ಲಾಟ್ ಒಳಗಿನಿಂದ ಲಾಕ್ ಆಗಿರುವುದನ್ನು ಕಂಡು ತಂದೆ ಬಾಗಿಲು ತಟ್ಟಿದ್ದಾರೆ. ಇದರಿಂದ ಗಾಬರಿಗೊಂಡ ಯುವತಿ ಮತ್ತು ಆಕೆಯ ಗೆಳೆಯ, ತಂದೆಗೆ ಸಿಕ್ಕಿಬೀಳಬಾರದೆಂಬ ಉದ್ದೇಶದಿಂದ ಎಂಟನೇ ಮಹಡಿಯ ಬಾಲ್ಕನಿಯಿಂದ ಕೆಳಗಿನ ಮಹಡಿಗೆ ಇಳಿಯಲು ಪ್ರಯತ್ನಿಸಿದ್ದಾರೆ.
ಈ ವೇಳೆ ಗೆಳೆಯ ಅಲಿ ಆಕೆಯ ಕೈ ಹಿಡಿದು ಸಹಾಯ ಮಾಡಲು ಯತ್ನಿಸಿದರೂ, ದುರಂತವಶಾತ್ ಸಕೀನಾ ಹಿಡಿತ ತಪ್ಪಿ ಎಂಟನೇ ಮಹಡಿಯಿಂದ ನೇರವಾಗಿ ಕೆಳಕ್ಕೆ ಬಿದ್ದಿದ್ದಾಳೆ. ತೀವ್ರವಾಗಿ ಗಾಯಗೊಂಡ ಆಕೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಗೆಳೆಯ ಅಲಿ ವಿರುದ್ಧ ತನಿಖೆ ಕೈಗೊಂಡಿದ್ದಾರೆ. ಪ್ರೀತಿ ಮತ್ತು ಭಯದ ನಡುವೆ ನಡೆದ ಈ ಸಾಹಸ ಯುವತಿಯ ಪ್ರಾಣವನ್ನೇ ಬಲಿಪಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























