ಹುಡುಗಿಯರು, ಆಂಟಿಯರು ಲಭ್ಯ ಎಂದು ಪೋಸ್ಟ್ ಹಾಕಿದ್ದ ಯುವಕನ ಬಂಧನ

ಮಡಿಕೇರಿ: ಕೊಡಗಿನಲ್ಲಿ ಪ್ರವಾಸಿಗರಿಗೆ ಹುಡುಗಿಯರು ಮತ್ತು ಆಂಟಿಯರು ಡೇಟಿಂಗ್ ಮಾಡಲು ಲಭ್ಯವಿದ್ದಾರೆ ಎಂದು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದ ಯುವಕನನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬಾಗಲಕೋಟೆ ನಿವಾಸಿ ನಾಗಪ್ಪ(26) ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ ಆರೋಪಿಯು ಈ ಹಿಂದೆ ಪುಣೆಯಲ್ಲಿ ಹುಡುಗಿಯರು ಸಿಗುತ್ತಾರೆ ಎನ್ನುವ ಪೋಸ್ಟ್ ನಂಬಿ 4 ಸಾವಿರ ರೂ. ಕಳೆದುಕೊಂಡಿದ್ದನಂತೆ. ಹೀಗಾಗಿ ತಾನು ಕೂಡ ಏಕೆ ಇದೇ ರೀತಿಯಲ್ಲಿ ಪೋಸ್ಟ್ ಹಾಕಿ ಹಣ ಮಾಡಬಾರದು ಎಂದು ಕೆಟ್ಟ ಆಲೋಚನೆ ಮಾಡಿದ್ದ ಎನ್ನಲಾಗಿದೆ.
ಇದೇ ರೀತಿಯ ಪೋಸ್ಟ್ ಹಾಕಿ ಆರೋಪಿಯು 30ರಿಂದ 40 ಸಾವಿರ ರೂಪಾಯಿ ಸಂಪಾದನೆ ಮಾಡಿದ್ದ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಪೇಜ್ ವಿರುದ್ಧ ಕ್ರಮಕೈಗೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD