11:07 PM Wednesday 20 - August 2025

ಭೀಕರ ಅಪಘಾತ: ಪಾರ್ಟಿ ಮುಗಿಸಿ ಮನೆಗೆ ಬೈಕ್ ನಲ್ಲಿ ಬರುತ್ತಿದ್ದ ಯುವಕರು ಸಾವು

acident
22/09/2023

ಬೆಂಗಳೂರು: ಮುಂಜಾನೆ ಸುಮಾರು 3.30 ಹೊತ್ತಿಗೆ ಬಿಎಂಡಬ್ಲ್ಯೂ ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ದುರ್ಮರಣಕ್ಕೀಡಾಗಿದ್ದಾರೆ. ಮನಮೋಹನ್ (31) ನಿಖಿಲ್ (25) ಮೃತ ಪಟ್ಟವರು ಎಂದು ಗುರುತಿಸಲಾಗಿದೆ.

ಮೋಹನ್ ಮತ್ತು ನಿಖಿಲ್ ಸ್ನೇಹಿತರ ಜೊತೆ ಪಾರ್ಟಿ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದಾಗ ಅತಿವೇಗವಾಗಿ ಬಿಎಂಡಬ್ಲೂ ಬೈಕ್ ಚಾಲನೆ ಮಾಡುತ್ತಿದ್ದ ಯುವಕರು ಯಶವಂತಪುರದಿಂದ ಆರ್ಎಂಸಿ ಯಾರ್ಡ್ ರೋಡ್ ಕಡೆಗೆ ಡ್ರೈವ್ ಮಾಡಿಕೊಂಡು ಬರುತ್ತಿದ್ದರು.

ಮದ್ಯ ಸೇವಿಸಿ ಹೆಲ್ಮೇಟ್ ಇಲ್ಲದೇ ಬೈಕ್ ಚಲಾಯಿಸುತ್ತಿದ್ದ ವೇಳೆ ಬೈಕ್ ನಿಯಂತ್ರಣಕ್ಕೆ ಸಿಗದೇ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಇಬ್ಬರು ಬೈಕ್ ನಿಂದ ಕೆಳಗೆ ಬಿದ್ದು ತೀವ್ರ ರಕ್ತಸ್ರಾವವಾಗಿ, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಯಶವಂತಪುರ ಯಾರ್ಡ್ ಬಳಿ ಈ ಅಪಘಾತ ನಡೆದಿದೆ. ಯಶವಂತಪುರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ

ಇತ್ತೀಚಿನ ಸುದ್ದಿ

Exit mobile version