ಹಾವಿನ ವಿಷ ರವಾನೆ ಪ್ರಕರಣ: ಯೂಟ್ಯೂಬರ್ ಎಲ್ವಿಶ್ ಯಾದವ್ ಬಂಧನ

ಉತ್ತರ ಪ್ರದೇಶದ ನೋಯ್ಡಾದಲ್ಲಿ ಆಯೋಜಿಸಿದ್ದ ರೇವ್ ಪಾರ್ಟಿಯಲ್ಲಿ ಹಾವಿನ ವಿಷವನ್ನು ಒದಗಿಸಿದ ಆರೋಪದ ಮೇಲೆ ಯೂಟ್ಯೂಬರ್ ಎಲ್ವಿಶ್ ಯಾದವ್ ಅವರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಕಳೆದ ವರ್ಷ ನವೆಂಬರ್ 3 ರಂದು ನೋಯ್ಡಾದ ಸೆಕ್ಟರ್ 51 ರ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ 26 ವರ್ಷದ ಯೂಟ್ಯೂಬರ್ ಹಾವಿನ ವಿಷವನ್ನು ಒದಗಿಸಿದ್ದಾನೆ ಎಂದು ಆರೋಪಿಸಲಾಗಿದೆ. ಪಾರ್ಟಿಯಿಂದ ಸಂಗ್ರಹಿಸಿದ ಮಾದರಿಗಳಲ್ಲಿ ಹಾವಿನ ವಿಷದ ಇರುವುದನ್ನು ವಿಧಿವಿಜ್ಞಾನ ವರದಿಗಳು ಈ ಹಿಂದೆ ದೃಢಪಡಿಸಿದ್ದವು.
ಎಲ್ವಿಶ್ ಯಾದವ್ ಮತ್ತು ಇತರ ಆರು ಜನರ ವಿರುದ್ಧ ವನ್ಯಜೀವಿ (ಸಂರಕ್ಷಣಾ) ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 120 ಎ (ಕ್ರಿಮಿನಲ್ ಪಿತೂರಿ) ನಿಬಂಧನೆಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಈ ಹಿಂದೆ ಎಲ್ವಿಶ್ ಅವರನ್ನು ಪ್ರಶ್ನಿಸಲಾಗಿದ್ದರೂ, ಪೊಲೀಸರು ಮಾಜಿ ಬಿಗ್ ಬಾಸ್ ಸ್ಪರ್ಧಿಯನ್ನು ಬಂಧಿಸಿರಲಿಲ್ಲ.
ನವೆಂಬರ್ 3 ರಂದು ಪೊಲೀಸರು ಐದು ನಾಗರಹಾವುಗಳು ಸೇರಿದಂತೆ ಒಂಬತ್ತು ಹಾವುಗಳನ್ನು ಆರೋಪಿಗಳ ಬಳಿಯಿಂದ ರಕ್ಷಿಸಿದ್ದರು. ಎಲ್ಲಾ ಒಂಬತ್ತು ಹಾವುಗಳಲ್ಲಿ ವಿಷ ಗ್ರಂಥಿಗಳು ಕಾಣೆಯಾಗಿವೆ ಎಂದು ತನಿಖೆಯಿಂದ ತಿಳಿದುಬಂದಿದೆ. ಬಂಧಿತರಿಂದ 20 ಮಿಲಿ ಹಾವಿನ ವಿಷವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth