10:12 AM Thursday 21 - August 2025

ಗ್ರಂಥಾಲಯದಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

16/10/2020

ಬೆಂಗಳೂರು: ಸಚಿವಾಯ ಗ್ರಂಥಾಲಯದಲ್ಲಿ 2020-21 ನೇ ಸಾಲಿನ ಒಂದು ವರ್ಷದ ಅವಧಿಗೆ ಅಪ್ರೆಂಟಿಸ್ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

ಅಪ್ರೆಂಟಿಸ್ ತರಬೇತಿಗೆ ಅಭ್ಯರ್ಥಿಗಳನ್ನು ವಿದ್ಯಾರ್ಹತೆ ಅನುಗುಣವಾಗಿ ಆಯ್ಕೆ ಮಾಡಲಾಗುವುದು. ಗ್ರಾಜುಯೇಟ್ ಅಪ್ರೆಂಟಿಸ್ (ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ) ತರಬೇತಿಗೆ ಲೈಬ್ರರಿ ಸೈನ್ಸ್‍ನಲ್ಲಿ ಪದವಿ (ಬಿ.ಎಲ್.ಐ.ಎಸ್.ಸಿ) ಪಡೆದಿರಬೇಕು. ಇವರಿಗೆ ಪ್ರತಿ ಮಾಹೆ 10.000 ರೂ. ಸ್ಟೈಫಂಡ್ ನೀಡಲಾಗುವುದು.

ಟೆಕ್ನಿಶಿಯನ್ ಅಪ್ರೆಂಟಿಸ್ (ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ) ಗೆ ಲೈಬ್ರರಿ ಸೈನ್ಸ್‍ನಲ್ಲಿ ಡಿಪ್ಲೋಮಾ ಪಡೆದಿರಬೇಕು. ಇವರಿಗೆ ಪ್ರತಿ ಮಾಹೆ 8,000 ರೂ. ಸ್ಟೈಫಂಡ್ ನೀಡಲಾಗುವುದು. ಹಾಗೂ ಟೆಕ್ನಿಶಿಯನ್ ಅಪ್ರೆಂಟಿಸ್ (ಕರ್ಮಷಿಯಲ್ ಪ್ರಾಕ್ಟಿಸ್) ಗೆ ಕರ್ಮಷಿಯಲ್ ಪ್ರಾಕ್ಟಿಸ್‍ನಲ್ಲಿ ಡಿಪ್ಲೋಮಾ ಪಡೆದಿರಬೇಕು. ಇವರಿಗೆ ಪ್ರತಿ ಮಾಹೆ 8,000 ರೂ ಸ್ಟೈಫಂಡ್ ನೀಡಲಾಗುವುದು.

ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಪ್ರಧಾನ ಮುಖ್ಯ ಗ್ರಂಥಾಧಿಕಾರಿ, ಸಚಿವಾಲಯ ಗ್ರಂಥಾಲಯ, ಕೊಠಡಿ ಸಂ: 11 ನೆಲಮಹಡಿ, ವಿಧಾನ ಸೌಧ ಬೆಂಗಳೂರು-560001 ಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ನವೆಂಬರ್ 11 ಕೊನೆಯ ದಿನವಾಗಿರುತ್ತದೆ.ಹೆಚ್ಚಿನ ವಿವರಗಳಿಗೆ ವೆಬ್‍ಸೈಟ್ ವಿಳಾಸ: ksecretariatlibray@gmail.com ಹಾಗೂ ದೂರವಾಣಿ ಸಂಖ್ಯೆ: 080-22033462/3011 ಗೆ ಸಂಪರ್ಕಿಸಬಹುದು ಎಂದು ಪ್ರಧಾನ ಮುಖ್ಯ ಗ್ರಂಥಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version