ಮದುವೆಯಾಗುವುದಾಗಿ ನಂಬಿಸಿ ಯುವತಿಗೆ 18 ಲಕ್ಷ ರೂ. ವಂಚನೆ: ಕಾನ್’​ಸ್ಟೇಬಲ್ ವಿರುದ್ಧ ದೂರು  

girish
24/06/2024

ಉತ್ತರ ಕನ್ನಡ:  ಪೊಲೀಸ್ ಕಾನ್ ​ಸ್ಟೇಬಲ್  ಒಬ್ಬ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ 18 ಲಕ್ಷ ರೂಪಾಯಿ ಪಡೆದು ವಂಚಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಲ್ಲಿ ನಡೆದಿದೆ.

ಮುಂಡಗೋಡು ಠಾಣೆಯ ಕಾನ್ ​​ಸ್ಟೇಬಲ್ ಗಿರೀಶ್.ಎಸ್.ಎಮ್. ವಂಚಿಸಿರುವ ಆರೋಪಿಯಾಗಿದ್ದಾನೆ.  ಚನ್ನರಾಯಪಟ್ಟಣ ಮೂಲದ ಸುಚಿತ್ರ ಮೋಸ ಹೋದ ಯುವತಿಯಾಗಿದ್ದಾರೆ. ಇದೀಗ ನ್ಯಾಯ ಕೊಡಿಸುವಂತೆ  ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಈ ಬಗ್ಗೆ ಈ ಹಿಂದೆ ಎಸ್.ಪಿ ವಿಷ್ಣುವರ್ಧನ್ ಅವರಿಗೆ  ಯುವತಿ ದೂರು ನೀಡಿದ್ದರು. ಈ ವೇಳೆ ತನಿಖೆ ನಡೆಸಿದಾಗ ಹಣ ಪಡೆದದ್ದು ನಿಜ, ಆ ಹಣವನ್ನು ವಾಪಸ್ ನೀಡುತ್ತೇನೆ ಎಂದು ಒಪ್ಪಿಕೊಂಡಿದ್ದ  ಗಿರೀಶ್, ಮದುವೆಯಾಗಲು ನಿರಾಕರಿಸಿದ್ದ ಎನ್ನಲಾಗಿದೆ.

ಇದಾದ ಬಳಿಕವೂ ಆತ ಹಣ ನೀಡದೇ ಇದ್ದ ಹಿನ್ನೆಲೆಯಲ್ಲಿ ಯುವತಿ ಮುಂಡಗೋಡು ಠಾಣೆಗೆ ತೆರಳಿ ವಂಚನೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಸದ್ಯ ಆರೋಪಿ ಗಿರೀಶ್ ವಿರುದ್ಧ ಮುಂಡಗೋಡು ಪೊಲೀಸರು ಕಲಂ 420 ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version