ಆಹಾರ ಕಿಟ್ ಸಂಗ್ರಹಿಸೋ ವೇಳೆ ನಡೀತು ಅವಘಡ: 18 ಮಂದಿ ಫೆಲೆಸ್ತೀನಿಯರು ಸಾವು

ಆಹಾರದ ಕಿಟ್ ಗಳನ್ನು ಸಂಗ್ರಹಿಸಲು ಸಮುದ್ರಕ್ಕೆ ಇಳಿದ ಫೆಲೆಸ್ತೀನಿಯರ ಪೈಕಿ 18 ಮಂದಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸಮುದ್ರದ ಮೂಲಕ ಆಹಾರ ತಲುಪಿಸುವ ಸೌಲಭ್ಯವನ್ನು ಇಸ್ರೇಲ್ ಪ್ರತಿಬಂಧಿಸಿರುವ ಹಿನ್ನೆಲೆಯಲ್ಲಿ ಆಕಾಶ ಮಾರ್ಗದ ಮೂಲಕ ಆಹಾರವನ್ನು ತಲುಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಾಕಲಾದ ಆಹಾರ ಕಿಟ್ ಗಳು ಸಮುದ್ರದ ತೀರಕ್ಕೆ ಬಿದ್ದಿತ್ತು. ಅದನ್ನು ಪಡಕೊಳ್ಳಲು ಫೆಲೆಸ್ತೀನಿಯರು ನೀರಿಗಿಳಿದ ವೇಳೆ ಈ ಅನಾಹುತ ಸಂಭವಿಸಿದೆ.
ಆಹಾರ ಕಿಟ್ ಗಳನ್ನು ಪಡೆದುಕೊಳ್ಳುವುದಕ್ಕಾಗಿ ನೂರಾರು ಮಂದಿ ಸಮುದ್ರ ತೀರಕ್ಕೆ ಧಾವಿಸಿದ್ದಾರೆ ಈ ಸಂದರ್ಭದಲ್ಲಿ ಈ ಸಾವು ಸಂಭವಿಸಿದೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ
ಈ ತಿಂಗಳ ಆರಂಭದಲ್ಲಿ ಆಹಾರ ಕಿಟ್ ಗಳು ತಲೆಗೆ ಬಿದ್ದು ಐದು ಮಂದಿ ಸಾವಿಗೀಡಾಗಿದ್ದರು.
ಗಾಝಾ ಸಂಘರ್ಷಕ್ಕೆ ಆರು ತಿಂಗಳು ತುಂಬುತ್ತಾ ಬರುತ್ತಿದ್ದು ತೀವ್ರ ಹಸಿವಿನ ಕ್ಷಾಮ ತಲೆದೋರಿದೆ.. ಈ ಹಿನ್ನೆಲೆಯಲ್ಲಿ ಅಮೆರಿಕ ಸಹಿತ ಜಗತ್ತಿನ ವಿವಿಧ ರಾಷ್ಟ್ರಗಳು ಆಕಾಶ ಮಾರ್ಗದ ಮೂಲಕ ಆಹಾರ ಕಿಟ್ ಗಳನ್ನು ಗಾಝಾಗೆ ಉದುರಿಸುತ್ತಿವೆ. ಇದೇ ವೇಳೆ ವಾಹನದ ಮೂಲಕ ಆಹಾರ ಸಾಮಗ್ರಿಗಳನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದು ಆಗ್ರಹಿಸಿರುವ ಹಮಾಸ್ ಆಕಾಶ ಮಾರ್ಗದ ಮೂಲಕ ಉದುರಿಸುವ ವ್ಯವಸ್ಥೆಯನ್ನು ನಿಲ್ಲಿಸಬೇಕು ಎಂದು ಕೋರಿದೆ. ಇದೇ ವೇಳೆ ಯುದ್ಧ ವಿರಾಮ ಘೋಷಿಸಬೇಕು ಎಂದು ವಿಶ್ವಸಂಸ್ಥೆ ನಿರ್ಣಯ ಅಂಗೀಕರಿಸಿ ದಿನಗಳಾದರೂ ಇಸ್ರೇಲ್ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth