ಚುನಾವಣಾ ಬಾಂಡ್ ವಿಶ್ವದಲ್ಲೇ ಅತೀ ದೊಡ್ಡ ಹಗರಣ: ಸಚಿವೆ ನಿರ್ಮಲಾ ಸೀತಾರಾಮ್ ಪತಿ ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಆರೋಪ

ನಿರಂತರವಾಗಿ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರ ಪತಿ, ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್, “ಚುನಾವಣಾ ಬಾಂಡ್ ದೇಶದ ಅತೀ ದೊಡ್ಡ ಹಗರಣವಲ್ಲ, ವಿಶ್ವದಲ್ಲೇ ಅತೀ ದೊಡ್ಡ ಹಗರಣ ಇದಾಗಿದೆ” ಎಂದಿದ್ದಾರೆ. ಇದಕ್ಕಾಗಿ ಬಿಜೆಪಿ ಶಿಕ್ಷೆಗೆ ಒಳಗಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಚುನಾವಣಾ ಬಾಂಡ್ ವಿಚಾರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ನಿರ್ಮಲ ಸೀತಾರಾಮನ್ ರ ಪತಿ ಪರಕಾಲ ಪ್ರಭಾಕರನ್ , “ಚುನಾವಣಾ ಬಾಂಡ್ ಅತೀ ಪ್ರಮುಖ ಚರ್ಚೆಯ ವಿಷಯವಾಗುತ್ತದೆ. ಇದು ಬಿಜೆಪಿ ಮತ್ತು ಇತರೆ ಪಕ್ಷ ಅಥವಾ ಬಿಜೆಪಿ ಮತ್ತು ಇತರೆ ಮೈತ್ರಿಕೂಟಗಳ ನಡುವೆ ನಡೆಯುವ ಸಮರವಲ್ಲ, ಚುನಾವಣಾ ಬಾಂಡ್ ವಿಚಾರವು ಬಿಜೆಪಿ ಮತ್ತು ಭಾರತದ ಜನರ ನಡುವಿನ ಹೋರಾಟಕ್ಕೆ ಕಾರಣವಾಗಲಿದೆ” ಎಂದು ಅಭಿಪ್ರಾಯಿಸಿದರು.
ಪ್ರಸ್ತುತ ಚುನಾವಣಾ ಬಾಂಡ್ ವಿಚಾರವು ಸಾಮಾನ್ಯ ಜನರಿಗೆ ಶೀಘ್ರವಾಗಿ ತಲುಪುತ್ತಿದೆ. ಇದು ದೇಶದಲ್ಲೇ ಅತೀ ದೊಡ್ಡ ಹಗರಣವಲ್ಲ ಬದಲಾಗಿ ವಿಶ್ವದಲ್ಲೇ ಅತೀ ದೊಡ್ಡ ಹಗರಣ ಎಂಬುದನ್ನು ಜನರು ನಿಧಾನವಾಗಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಈ ಚುನಾವಣಾ ಬಾಂಡ್ ವಿಚಾರದಿಂದಾಗಿ ಕೇಂದ್ರ ಸರ್ಕಾರವು ಮತದಾರರಿಂದ ಕಠಿಣ ಶಿಕ್ಷೆಗೆ ಒಳಗಾಗಲಿದೆ” ಎಂದು ಪರಕಾಲ ಪ್ರಭಾಕರ್ ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth