ಮೆಕ್ ಡೊನಾಲ್ಡ್ ನಲ್ಲಿ ಆಹಾರ ಸೇವಿಸಿ ಇಬ್ಬರು ಅಸ್ವಸ್ಥ

30/04/2024

ನೋಯ್ಡಾ ಸೆಕ್ಟರ್ 18 ರಲ್ಲಿರುವ ಮೆಕ್ ಡೊನಾಲ್ಡ್ ಮಳಿಗೆ ಮತ್ತು ಸೆಕ್ಟರ್ 104 ರ ಥಿಯೋಬ್ರೋಮಾ ಎಂಬ ಬೇಕರಿಯ ಶಾಖೆಯ ವಿರುದ್ಧ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (ಎಫ್ಎಸ್ ಡಿಎ) ಇಲಾಖೆ ಕ್ರಮ ಕೈಗೊಂಡಿದೆ. ಒಬ್ಬ ಗ್ರಾಹಕ ಮೆಕ್ ಡೊನಾಲ್ಡ್ ನಲ್ಲಿ ಫ್ರೈಸ್ ಮತ್ತು ಬರ್ಗರ್ ತಿಂದಿದ್ರೆ ಇನ್ನೊಬ್ಬ ವ್ಯಕ್ತಿ ಥಿಯೋಬ್ರೋಮಾ ಮಳಿಗೆಯಿಂದ ಆರ್ಡರ್ ಮಾಡಿದ ಹಳಸಿದ ಅನಾನಸ್ ಕೇಕ್ ತಿಂದು ಅಸ್ವಸ್ಥಗೊಂಡ ಘಟನೆ ನಡೆದಿದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆನ್ ಲೈನ್ ಫುಡ್ ಸೇಫ್ಟಿ ಕನೆಕ್ಟ್ ಪೋರ್ಟಲ್‌ನಲ್ಲಿ ದೂರುಗಳನ್ನು ದಾಖಲಿಸಲಾಗಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಗ್ರಾಹಕರಿಂದ ದೂರು ಸ್ವೀಕರಿಸಿದ ನಂತರ ಮಾದರಿಗಳನ್ನು ಸಂಗ್ರಹಿಸಲು ಗೌತಮ್ ಬುದ್ಧ ನಗರದ ಎಫ್ಎಸ್ ಡಿಎ ತಂಡವು ನೋಯ್ಡಾ ಸೆಕ್ಟರ್ 18 ರಲ್ಲಿರುವ ಮೆಕ್ಡೊನಾಲ್ಡ್ ಮಳಿಗೆಗೆ ಭೇಟಿ ನೀಡಿತು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

ಈ ಕುರಿತು ಎಎನ್ಐ ಜೊತೆ ಮಾತನಾಡಿದ ಗೌತಮ್ ಬುದ್ಧ ನಗರದ ಎಫ್ಡಿಎ ಸಹಾಯಕ ಆಯುಕ್ತ (ಆಹಾರ) ಅರ್ಚನಾ ಧೀರನ್, ತಂಡವು ತಕ್ಷಣ ಕ್ರಮ ಕೈಗೊಂಡಿದೆ ಮತ್ತು ತಾಳೆ ಎಣ್ಣೆ, ಚೀಸ್ ಮತ್ತು ಮಯೋನೈಸ್ ಮಾದರಿಗಳನ್ನು ಮಳಿಗೆಯಿಂದ ಸಂಗ್ರಹಿಸಲಾಗಿದೆ ಎಂದು ಹೇಳಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version