ಜೈಲಲ್ಲೇ ಕೊಲೆ ಆರೋಪಿಗಳಿಗೆ ಪ್ರೇಮಾಂಕುರ: ಕಾರಾಗೃಹದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರೇಮಿಗಳು..!

15/07/2023

ಪ್ರೇಮ ಎಂಬುವುದು ಮಾಯೆ ಎಂಬ ಮಾತಿದೆ. ಅದು ಇಲ್ಲಿ ನಿಜಕ್ಕೂ ನಿಜ ಎಂದು ಅನ್ನಿಸುತ್ತಿದೆ. ಹೌದು. ಕೊಲೆ ಕೇಸ್ ನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಇಬ್ಬರು ಕೈದಿಗಳು ಜೈಲಿನಲ್ಲೇ ಪರಸ್ಪರ ಮಾತನಾಡಿ ಪ್ರೇಮಾಂಕುರಗೊಂಡು ಜೈಲಿನಲ್ಲೇ ಮದುವೆ ಆದ ಅಪರೂಪದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಬಿರ್‌ ಭೂಮ್‌ ನ ನಿವಾಸಿ ಸಹನಾರಾ ಖಾತುನ್ ಹಾಗೂ ಅಬ್ದುಲ್‌ ಹಸೀಮ್‌ ಮದುವೆಯಾದ ಜೋಡಿ. ವಧು ಖಾತುನ್ ಕಳೆದ ಆರು ವರ್ಷಗಳಿಂದ ಜೈಲಿನಲ್ಲಿದ್ದರೆ, ಅಸ್ಸಾಂ ಮೂಲದ ಅಬ್ದುಲ್ ಹಸೀಮ್ ಎಂಟು ವರ್ಷಗಳಿಂದ ಬಂಧನದಲ್ಲಿದ್ದಾರೆ.

ಪಶ್ಚಿಮ ಬಂಗಾಳದ ಬರ್ಧಮಾನ್ ಜಿಲ್ಲಾ ಸುಧಾರಣಾ ಕೇಂದ್ರವು ಈ ಅಪರೂಪದ ಮದುವೆಗೆ ಸಾಕ್ಷಿಯಾಗಿದೆ. ಜೈಲಿನಲ್ಲಿ ಮಾಡಿದ ಭೇಟಿಯು ಪರಿಚಯಕ್ಕೆ ತಿರುಗಿ ಪರಿಚಯ ಸ್ನೇಹವಾಗಿ, ಕೊನೆಗೆ ಮದುವೆಯಲ್ಲಿ ಸಮಾಪ್ತಿಗೊಂಡಿತು.
ಮದುವೆಯಾದ ನೂತನ ವಧು–ವರರಿಗೆ ಜೈಲು ಅಧಿಕಾರಿಗಳು ಐದು ದಿನಗಳ ಕಾಲ ಪೆರೋಲ್‌ ನೀಡಿದೆ.

ತಮ್ಮ ಮದುವೆ ಬಗ್ಗೆ ಪ್ರತಿಕ್ರಿಯಿಸಿದ ಜೋಡಿ, ಇನ್ನು ಮುಂದೆ ಯಾವುದೇ ಆಪತ್ತಿನಲ್ಲಿ ಸಿಲುಕಬಾರದೆಂದು ನಾವು ನಿರ್ಧರಿಸಿದ್ದೇವೆ. ಎಲ್ಲರಂತೆ ನಾವೂ ಕೂಡಾ ಕುಟುಂಬವನ್ನು ಆರಂಭಿಸಿ ಚೆನ್ನಾಗಿ ಬದುಕುವ ಆಸೆ ಇದೆ ಎಂದು ಹೇಳಿಕೆ ನೀಡಿದ್ದಾರೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version