340 ಕೆ.ಜಿ. ತೂಕದ ಬೃಹತ್ ಮೀನನ್ನು ಕೊಂಡುಕೊಳ್ಳಲು ಮೀನು ಅಂಗಡಿ ಮುಂದೆ ಜಾತ್ರೆಯಂತೆ ಸೇರಿದ ಜನ!

20/08/2023
ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ಖಾಸಗಿ ಮೀನು ಅಂಗಡಿಗೆ ಮಂಗಳೂರಿನಿಂದ ಬಂದ 340 ಕೆ.ಜಿ. ತೂಕದ ಬೃಹತ್ ಮೀನನ್ನು ನೋಡಿ ಗ್ರಾಹಕರು ಮುಗಿಬಿದ್ದ ಘಟನೆ ನಡೆದಿದೆ.
ನಗರದ ಉಪ್ಪಳ್ಳಿ ಬಡಾವಣೆಯ ಮೀನಿನ ಅಂಗಡಿಯಲ್ಲಿ ಬೃಹತ್ ಮೀನನ್ನು ಕಂಡು ಸಾರ್ವಜನಿಕರು ಅಚ್ಚರಿಗೀಡಾಗಿದ್ದರು. ಮೀನನ್ನು ನೋಡುತ್ತಿದ್ದಂತೆಯೇ ಸಾರ್ವಜನಿಕರು ಮೊಬೈಲ್ ತೆಗೆದು ಫೋಟೋ, ವಿಡಿಯೋ ಮಾಡುವುದರಲ್ಲಿ ಮಗ್ನರಾಗಿದ್ದಾರೆ.
ಇನ್ನೂ ಒಂದು ಕೆ.ಜಿ. ನಮಗೆ ಕೊಡಿ ಸಾವಿರ ರೂಪಾಯಿ ಕೊಡ್ತೀವಿ ಅಂತ ಗ್ರಾಹಕರು ದಂಬಾಲು ಬಿದ್ದರೂ ಅಂಗಡಿ ಮಾಲಿಕರು ಜನರ ಉತ್ಸಾಹ ಕಂಡು ಬೆಲೆ ಏರಿಸುತ್ತಲೇ ಹೋಗುತ್ತಿರುವುದು ಕಂಡು ಬಂತು.
ಇದು ಬೃಹತ್ ಅಂಬೂರು ಫಿಶ್ ಆಗಿದ್ದು, ಸೌದಿ ಅರೇಬಿಯಾದಲ್ಲಿ ಈ ಮೀನಿಗೆ ಹೆಚ್ಚು ಬೇಡಿಕೆ ಇದೆಯಂತೆ, ಮೊದಲ ಬಾರಿಗೆ ಈ ಬೃಹತ್ ಗಾತ್ರದ ಅಂಬೂರು ಮೀನನ್ನು ಅಂಗಡಿ ಮಾಲೀಕ ತರಿಸಿದ್ದಾರಂತೆ, ಜೊತೆಗೆ ಇಷ್ಟೊಂದು ದೊಡ್ಡ ಗಾತ್ರದ ಮೀನನ್ನು ಇದೇ ಮೊದಲು ನೋಡ್ತಿರೋ ಸಾರ್ವಜನಿಕರು ಅಂಗಡಿ ಮುಂದೆ ಜಾತ್ರೆಯಂತೆ ನೆರೆದಿದ್ದಾರೆ.
ವಿಡಿಯೋ ನೋಡಿ: