ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ: ಕೋಲಾರದಲ್ಲಿ ಸಿದ್ದರಾಮಯ್ಯಗಿಲ್ಲ ಟಿಕೆಟ್!

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಈಗಾಗಲೇ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಇದೀಗ 43 ಕ್ಷೇತ್ರಗಳಿಗೆ ಮೂರನೇ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಈ 43 ಅಭ್ಯರ್ಥಿಗಳ ಪಟ್ಟಿಯಲ್ಲಿ 16 ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಇನ್ನು ಮುಖ್ಯವಾಗಿ ಸಿದ್ದರಾಮಯ್ಯ ಅವರಿಗೆ ಕೋಲಾರ ಟಿಕೆಟ್ ನೀಡಿಲ್ಲ, ಬದಲಿಗೆ ಕೋಲಾರ ಟಿಕೆಟ್ ಕೊತ್ತೂರು ಮಂಜುನಾಥ್ ಅವರಿಗೆ ನೀಡಲಾಗಿದೆ. ಇದರಿಂದ ಸಿದ್ದರಾಮಯ್ಯ ವರುಣಾದಿಂದ ಮಾತ್ರ ಸ್ಪರ್ಧೆ ಮಾಡುತ್ತಿದ್ದಾರೆ.
ಕೊತ್ತೂರು ಮಂಜುನಾಥ್ ಅವರು 2013ರಲ್ಲಿ ಮುಳಬಾಗಿಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಆದರೆ ಅವರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಅಸಿಂಧುವಾದ್ದರಿಂದ 2018ರಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಈಗಾಗಲೇ ಮೊದಲ ಪಟ್ಟಿಯಲ್ಲಿ 166, ಎರಡನೇ ಪಟ್ಟಿಯಲ್ಲಿ 23 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು.
ಇದೀಗ ಮೂರನೇ ಪಟ್ಟಿಯಲ್ಲಿ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದ್ದು, ಇನ್ನೂ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸದೇ ಬಾಕಿ ಉಳಿಸಿಕೊಂಡಿದೆ. ಇದರಲ್ಲಿ ಹಾಲಿ ಶಾಸಕರಿರುವ 4 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸದಿರುವುದು ಅಚ್ಚರಿಗೆ ಕಾರಣವಾಗಿದೆ.
1. ಅಥಣಿ – ಲಕ್ಷ್ಮಣ್ ಸವದಿ
2. ಮೂಡಿಗೆರೆ – ನಯನ ಮೋಟಮ್ಮ
3. ಅರಸೀಕೆರೆ – ಶಿವಲಿಂಗೇಗೌಡ
4. ರಾಯಭಾಗ – ಮಹಾವೀರ್ ಮೋಹಿತ್
5. ಅರಬಾವಿ – ಅರವಿಂದ ದಳವಾಯಿ
6. ಬೆಳಗಾವಿ ಉತ್ತರ – ಆಸೀಫ್ ಸೇಠ್
7. ಬೆಳಗಾವಿ ದಕ್ಷಿಣ – ಪ್ರಭಾವತಿ ಮಾಸ್ತಿಮರಡಿ
8. ತೇರದಾಳ – ಸಿದ್ದಪ್ಪ ಕೊಣ್ಣೂರು
9. ದೇವರ ಹಿಬ್ಬರಗಿ – ಶರಣಪ್ಪ ಸುಣಗಾರ್
10. ಸಿಂಧಗಿ – ಅಶೋಕ್ ಮನಗೊಳಿ
11. ಕಲಬುರಗಿ ಗ್ರಾಮೀಣ – ರೇವೂನಾಯಕ್ ಬೆಳಮಗಿ
12. ಔರಾದ್ – ಭೀಮ್ ಸೇನ್ ರಾವ್ ಶಿಂಧೆ
13. ಮಾನ್ವಿ – ಹಂಪಯ್ಯ ನಾಯಕ್
14. ದೇವದುರ್ಗ – ಶ್ರೀದೇವಿ ನಾಯಕ್
15. ಸಿಂಧನೂರು – ಹಂಪನಗೌಡ ಬಾದರ್ಲಿ
16. ಶಿರಹಟ್ಟಿ – ಸುಜಾತ ದೊಡ್ಡಮನಿ
17. ನವಲಗುಂದ – ಕೋನರೆಡ್ಡಿ
18. ಕುಂದಗೋಳ – ಕುಸುಮಾ ಶಿವಳ್ಳಿ
19. ಕುಮಟಾ – ನಿವೇದಿತ್ ಆಳ್ವಾ
20. ಸಿರಗುಪ್ಪ – ಬಿಎಂ ನಾಗರಾಜ್
21. ಬಳ್ಳಾರಿ ನಗರ – ನಾ.ರ ಭರತ್ ರೆಡ್ಡಿ
22. ಜಗಳೂರು – ದೇವೇಂದ್ರಪ್ಪ
23. ಹರಪನಹಳ್ಳಿ – ಎನ್. ಕೊಟ್ರೇಶ್
24. ಹೊನ್ನಾಳಿ – ಶಾಂತನಗೌಡ
25. ಶಿವಮೊಗ್ಗ ಗ್ರಾಮೀಣ – ಶ್ರೀನಿವಾಸ್ ಕರಿಯಣ್ಣ
26. ಶಿವಮೊಗ್ಗ – ಎಚ್.ಸಿ. ಯೋಗೇಶ್
27. ಶಿಕಾರಿಪುರ – ಜಿ.ಬಿ. ಮಾಲತೇಶ್
28. ಕಾರ್ಕಳ – ಉದಯ್ ಶೆಟ್ಟಿ
29. ತರೀಕೆರೆ – ಶ್ರೀನಿವಾಸ್
30. ತುಮಕೂರು ಗ್ರಾಮೀಣ – ಷಣ್ಮುಗಪ್ಪ ಯಾದವ್
31. ಚಿಕ್ಕಬಳ್ಳಾಪುರ – ಪ್ರದೀಪ್ ಈಶ್ವರ್
32. ಕೋಲಾರ – ಕೊತ್ತೂರು ಮಂಜುನಾಥ್
33. ದಾಸರಹಳ್ಳಿ – ಧನಂಜಯ್ ಗೌಡ
34. ಚಿಕ್ಕಪೇಟೆ – ಆರ್.ವಿ ದೇವರಾಜ್
35. ಬೊಮ್ಮನಹಳ್ಳಿ – ಉಮಾಪತಿ ಶ್ರೀನಿವಾಸ್ ಗೌಡ
36. ಬೆಂಗಳೂರು ದಕ್ಷಿಣ – ಆರ್.ಕೆ ರಮೇಶ್
37. ಚನ್ನಪಟ್ಟಣ – ಗಂಗಾಧರ್
38. ಮದ್ದೂರು – ಉದಯ್ ಗೌಡ
39. ಹಾಸನ – ಬನವಾಸಿ ರಂಗಸ್ವಾಮಿ
40. ಮಂಗಳೂರು ದಕ್ಷಿಣ – ಜೆ.ಆರ್ ಲೋಬೋ
41. ಪುತ್ತೂರು – ಅಶೋಕ್ ರೈ
42. ಕೃಷ್ಣರಾಜ – ಎಂ.ಕೆ ಸೋಮಶೇಖರ್
43. ಚಾಮರಾಜ – ಹರೀಶ್ ಗೌಡ
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw