7:47 PM Saturday 25 - October 2025

ಡೆಂಗ್ಯೂ ಜ್ವರದಿಂದ 5 ವರ್ಷದ ಬಾಲಕ ಸಾವು: ವೈದ್ಯರ ನಿರ್ಲಕ್ಷ್ಯದ ಆರೋಪ

dengu
07/07/2024

ಗದಗ: ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಶಿರುಂಜ ಗ್ರಾಮದ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಧಾರವಾಡದ ಎಸ್‌ ಡಿಎಂ ಆಸ್ಪತ್ರೆಯಲ್ಲಿ ಭಾನುವಾರ ನಡೆದಿದೆ.

ಚಿರಾಯು ಹೊಸಮನಿ (5) ಮೃತಪಟ್ಟ ಬಾಲಕನಾಗಿದ್ದಾನೆ.  ಬಾಲಕನ ಸಾವಿನ ಬೆನ್ನಲ್ಲೇ ವೈದ್ಯರ ನಿರ್ಲಕ್ಷ್ಯದ ಶಂಕೆ ವ್ಯಕ್ತವಾಗಿದ್ದು,  ವೈದ್ಯರು ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದ ಕಾರಣ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

‘ಮಗುವಿಗೆ ಜ್ವರ, ವಾಂತಿ ಆಗಿತ್ತು. ಶಿರಹಟ್ಟಿ ಆಸ್ಪತ್ರೆಯಲ್ಲಿ ತೋರಿಸಿದಾಗ ಡೆಂಗಿ ಆಗಿದೆ, ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿದರು. ಜುಲೈ 4ರಂದು ಸಂಜೆ 6ಕ್ಕೆ ಜಿಮ್ಸ್‌ ಗೆ ಹೋದೆವು. ತುರ್ತು ಸಂದರ್ಭದಲ್ಲೂ ವೈದ್ಯರು ಐಸಿಯುಗೆ ಅಡ್ಮಿಟ್‌ ಮಾಡಿಕೊಂಡು, ಚಿಕಿತ್ಸೆ ನೀಡಲಿಲ್ಲ. ಮರುದಿನ ಬೆಳಿಗ್ಗೆ 10 ಗಂಟೆ ನಂತರ ಹುಬ್ಬಳ್ಳಿಯ ಕಿಮ್ಸ್‌ ಗೆ ಕರೆದುಕೊಂಡು ಹೋಗುವಂತೆ ಹೇಳಿದರು. ಜಿಮ್ಸ್‌ ವೈದ್ಯರೇ ಸರಿಯಾಗಿ ನೋಡಿದ್ದರೆ ನಮ್ಮ ಮಗ ಉಳಿಯುತ್ತಿದ್ದ’ ಎಂದು ಪೋಷಕರು ದೂರಿದ್ದಾರೆ.

‘ಡೆಂಗಿಯಿಂದ ಬಳಲುತ್ತಿದ್ದ ಶಿರುಂಜ ಗ್ರಾಮದ ಬಾಲಕನನ್ನು ಜಿಮ್ಸ್‌ ಗೆ ಕರೆತಂದಿದ್ದಾಗ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ನಮ್ಮ ಆಸ್ಪತ್ರೆಯಲ್ಲಿ ಎಂಟು ಗಂಟೆಗಳ ಕಾಲ ಅಷ್ಟೇ ಇದ್ದ. ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನು ಪೋಷಕರು ಧಾರವಾಡಕ್ಕೆ ಕರೆದುಕೊಂಡು ಹೋಗಿದ್ದರು’ ಎಂದು ಜಿಮ್ಸ್‌ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version