5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆ
ಗೋವಾ: 5 ವರ್ಷದ ಬಾಲಕಿಯನ್ನು ಅತ್ಯಾಚಾರವೆಸಗಿ ಹತ್ಯೆಮಾಡಿರುವ ಘಟನೆ ಗೋವಾದ ವಾಸ್ಕೋದಲ್ಲಿ ನಡೆದಿದೆ.
ಸಂತ್ರಸ್ತೆಯ ಕುಟುಂಬವು ಮೂಲತ ಪಶ್ಚಿಮ ಬಂಗಾಳದವರಾಗಿದ್ದು ವಲಸೆ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ವರದಿಗಳ ಪ್ರಕಾರ, ಶುಕ್ರವಾರ ರಾತ್ರಿ ಬಾಲಕಿಯ ತಂದೆ ಜೊತೆಗೆ ಕೆಲಸಕ್ಕೆ ತೆರಳಿದ್ದು,, ಅವರ ಐದು ವರ್ಷದ ಮಗಳು ಕೂಡ ಅವರೊಂದಿಗೆ ಇದ್ದಳು. ಮಧ್ಯರಾತ್ರಿ 12:15ರ ಸುಮಾರಿಗೆ ಆಕೆಯನ್ನು ತಮ್ಮ ಮನೆಗೆ ಹಿಂತಿರುಗುವಂತೆ ಹೇಳಿದ್ದರು. ಬಾಲಕಿಯು ಮನೆಗೆ ಹೊರಟಿದ್ದಳು. ಆದರೆ ಆಕೆಯ ತಂದೆ ಕೆಲಸ ಮುಗಿಸಿ ರಾತ್ರಿ 2 ಗಂಟೆಗೆ ಮನೆಗೆ ಮರಳಿದಾಗ ಮಗಳು ನಾಪತ್ತೆಯಾಗಿರುದು ತಿಳಿದು ಬಂದಿದೆ.
ಬಳಿಕ ಬಾಲಕಿಯ ಹುಡುಕಾಟ ನಡೆಸಿದ್ದಾರೆ. ಮರುದಿನ ಮುಂಜಾನೆ ಬಾಲಕಿಯು ಗೋವಾದ ವಾಸ್ಕೋದ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾರೂ, ವೈದ್ಯರು ಬರುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಸುನಿತಾ ಸಾವಂತ್, ಪೊಲೀಸ್ ವರಿಷ್ಠಾಧಿಕಾರಿ (ದಕ್ಷಿಣ) ಸುನಿತಾ ತಿಳಿಸಿದ್ದಾರೆ.
ಬಳಿಕ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ನಂತರ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಸಾವಂತ್ ಹೇಳಿದ್ದಾರೆ.
ಇನ್ನು ಘಟನೆಗೆ ಸಂಬಂದಿಸಿದಂತೆ 20 ಶಂಕಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಾಸ್ಕೋ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376, 302, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಸ್ಕೋ) ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಕೊಲೆಯ ರಾಜ್ಯದ ಪರವಾಗಿ ಪ್ರಕರಣವನ್ನು ದಾಖಲಿಸಿದ್ದಾರೆ. ಮತ್ತು ಗೋವಾ ಮಕ್ಕಳ ಕಾಯಿದೆಯ ಅಡಿಯಲ್ಲಿ, ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

























