3:24 PM Tuesday 18 - November 2025

ವ್ಯಕ್ತಿಯೊಬ್ಬರಿಂದ 53 ಸಾವಿರ ರೂ. ಎಗರಿಸಿದ ಸೈಬರ್ ಕಳ್ಳರು: ಹೇಗೆ ಜನರನ್ನು ಮೋಸ ಮಾಡ್ತಾರೆ ನೋಡಿ…

cyber thieves
08/07/2023

ಬೆಂಗಳೂರು: ಸೈಬರ್ ಕಳ್ಳರು ಇದೀಗ ವಿದ್ಯುತ್ ಬಿಲ್‌ ನಲ್ಲೂ  ಕೈಚಳಕ ತೋರಿಸಿದ್ದಾರೆ. ಬೆಸ್ಕಾಂ ಅಧಿಕಾರಿಗಳು ಎಂದು  ಹೇಳಿಕೊಂಡು ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳುವ ನೆಪದಲ್ಲಿ ಸೈಬರ್ ಕಳ್ಳರು ವ್ಯಕ್ತಿಯೊಬ್ಬರಿಂದ 53 ಸಾವಿರ ರೂ. ಎಗರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರಿನ ಕಾಡುಗೋಡಿ ನಿವಾಸಿ ನಾರಾಯಣ್ ಪ್ರಸಾದ್ ಅವರನ್ನು ವಂಚಿಸಿ 53 ಸಾವಿರ ರೂ. ಎಗರಿಸಿದ್ದಾರೆ. ಬೆಸ್ಕಾಂ ಅಧಿಕಾರಿಗಳು ಎಂದು ಹೇಳಿಕೊಂಡು ನಾರಾಯಣ್ ಪ್ರಸಾದ್ ಅವರಿಗೆ ಬಿಲ್ ಕಟ್ಟುವಂತೆ ಹೇಳಿದ್ದಾರೆ. ಕರೆಂಟ್ ಬಿಲ್ ಕಟ್ಟದೇ ಇದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಸಿದಾಗ ನಾರಾಯಣ್ ಬಿಲ್ ಪಾವತಿಸಲು ಒಪ್ಪಿಕೊಂಡಿದ್ದಾರೆ.

ನಂತರ ಒಂದು ಲಿಂಕ್ ಕಳಿಸಿ ಅದನ್ನು ಕ್ಲಿಕ್ ಮಾಡಿ ಫಾಲೋ ಮಾಡಿ ಎಂದು ಅವರು ಹೇಳಿದಂತೆ ನಾರಾಯಣ್ ಲಿಂಕ್ ಕ್ಲಿಕ್ ಮಾಡಿ 1 ರೂ. ಕಳುಹಿಸಿದ್ದಾರೆ.

ನಂತರ ತಮ್ಮ ಕೈಚಳಕ ತೋರಿಸಿದ ಸೈಬರ್ ಕಳ್ಳರು ಹಂತ ಹಂತವಾಗಿ ಅಕೌಂಟ್‌ನಿಂದ 53 ಸಾವಿರ ಎಗರಿಸಿದ್ದಾರೆ. ಸಂಬಂಧಪಟ್ಟ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ನಾರಾಯಣ್ ಪ್ರಸಾದ್ ದೂರು ದಾಖಲಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version