ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ: ಕಂಟೈನರ್​​ ಜೀಪೊಂದಕ್ಕೆ ಡಿಕ್ಕಿ ಹೊಡೆದು 6 ಜನ ಸಾವು

18/07/2023

ಕಂಟೈನರ್​​ ಜೀಪೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ 6 ಜನ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಥಾಣೆಯ ಭಿವಂಡಿ ನಾಸಿಕ್ ರಸ್ತೆಯ ಖಡ್ವಾಲಿ ಗ್ರಾಮದಲ್ಲಿ ನಡೆದಿದೆ.

ವೇಗವಾಗಿ ಬಂದ ಕಂಟೈನರ್‌ ಗೆ ಎದುರಿನಿಂದ ಬಂದ ಜೀಪ್ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ 6 ಜನ ಸಾವನ್ನಪ್ಪಿ ಮೂವರು ಗಾಯಗೊಂಡಿದ್ದಾರೆ. ಜೀಪಿನ ವಿರುದ್ಧ ದಿಕ್ಕಿನಿಂದ ಬಂದ ಟ್ರಕ್ ಜೀಪಿಗೆ ಡಿಕ್ಕಿ ಹೊಡೆದು, ಜೀಪನ್ನು ಸುಮಾರು 100 ಮೀಟರ್‌ವರೆಗೆ ಎಳೆದೊಯ್ದು ಪಲ್ಟಿಯಾಗಿದೆ.

ಮೃತರನ್ನು ಚಿನ್ಮಯಿ ವಿಕಾಸ್ ಶಿಂಧೆ, ರಿಯಾ ಕಿಶೋರ್ ಪರದೇಶಿ, ಚೈತಾಲಿ ಸುಶಾಂತ್ ಪಿಂಪಲ್, ಸಂತೋಷ್ ಅನಂತ್ ಜಾಧವ್, ವಸಂತ್ ಧರ್ಮ ಜಾಧವ್, ಪ್ರಜ್ವಲ್ ಶಂಕರ್ ಫಿರ್ಕೆ ಎಂದು ಗುರುತಿಸಲಾಗಿದೆ.

ಗಾಯಗೊಂಡವರನ್ನು ಭಿವಂಡಿಯ ಐಜಿಎಂ ಆಸ್ಪತ್ರೆಗೆ ಮತ್ತು ಕಲ್ವಾದಲ್ಲಿನ ನಾಗರಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ದಿಲೀಪ್ ಕುಮಾರ್ ವಿಶ್ವಕರ್ಮ, ಚೇತನ ಗಣೇಶ್, ಕುನಾಲ್ ಜ್ಞಾನೇಶ್ವರ್ ಭಮ್ರೆಎಂದು ಹೇಳಲಾಗಿದೆ.

ಇನ್ನೂ ಥಾಣೆಯ ಈ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಸವಾರರು ನಿಧಾನವಾಗಿ ವಾಹನ ಚಲಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version