ಒಂದೇ ಕುಟುಂಬದ 6 ಮಂದಿ ಕಾಳಿ ನದಿಯಲ್ಲಿ ಮುಳುಗಿ ಸಾವು!: ಪ್ರವಾಸಕ್ಕೆ ಬಂದಿದ್ದವರ ದುರಂತ ಸಾವು!

drown water
21/04/2024

ಕಾರವಾರ: ಕಾಳಿ ನದಿಯಲ್ಲಿ ಒಂದೇ ಕುಟುಂಬದ ಆರು ಪ್ರವಾಸಿಗರು ಸಾವನ್ನಪ್ಪಿರುವ ಘಟನೆ  ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಕ್ವಾಡ ಗ್ರಾಮದ ಬಳಿ ನಡೆದಿದೆ.
ಈ ಕುಟುಂಬ ಪ್ರವಾಸಕ್ಕೆಂದು ತೆರಳಿದ್ದು, ಊಟ ಮಾಡಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದ ವೇಳೆ ಮಗುವೊಂದು ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದು, ಮಗುವನ್ನು ರಕ್ಷಿಸಲು ಮುಂದಾದ ವೇಳೆ ಇತರರೂ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ನಜೀರ್ ಅಹ್ಮದ್(40), ಅಲ್ಛೀಯಾ ಅಹ್ಮದ್(10), ಮೋಹಿನ್(6), ರೇಷಾ ಉನ್ನಿಸಾ(38), ಇಫ್ರಾ‌ ಅಹ್ಮದ್(15), ಅಬೀದ್ ಅಹ್ಮದ್(12) ಮೃತಪಟ್ಟವರು ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಹುಬ್ಬಳ್ಳಿಯ ಈಶ್ವರ ನಗರದ ನಿವಾಸಿಗಳಾಗಿದ್ದಾರೆ.

ಒಟ್ಟು 8 ಜನರು  ಪ್ರವಾಸಕ್ಕೆ ಆಗಮಿಸಿದ್ದರು.  6 ಮಂದಿ ನದಿಗೆ ಹಾರಿ ಪ್ರಾಣ ಬಿಟ್ಟಿದ್ದು, ಇಬ್ಬರು ಮಹಿಳೆಯರು ನೀರಿಗೆ ಹಾರದ ಹಿನ್ನೆಲೆ ಅಪಾಯದಿಂದ ಪಾರಾಗಿದ್ದಾರೆ.

ಸದ್ಯ ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ದಾಂಡೇಲಿ  ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದೆ. ದಾಂಡೇಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version