ನರ್ಮದಾ ನದಿಗೆ ಈಜಲು ಇಳಿದಿದ್ದ ಒಂದೇ ಕುಟುಂಬದ 7 ಮಂದಿಯ ದಾರುಣ ಸಾವು!

ಗುಜರಾತ್: ನರ್ಮದಾ ನದಿಯಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ಏಳು ಮಂದಿ ನೀರುಪಾಲಾಗಿರುವ ಘಟನೆ ಗುಜರಾತ್ ನ ಪೊಯಿಚಾದಲ್ಲಿ ನಡೆದಿದೆ.
ಒಟ್ಟು 8 ಮಂದಿ ನರ್ಮದಾ ನದಿಗೆ ಈಜಲು ಇಳಿದಿದ್ದರು. ಈ ಪೈಕಿ 7 ಮಂದಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದು, ಓರ್ವನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ನರ್ಮದಾ ಜಿಲ್ಲಾ ಪೊಲೀಸರು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ ಸಹಾಯ ಕೇಳಿದ್ದು, ಸದ್ಯ ಎನ್ ಡಿಆರ್ ಎಫ್ ಹಾಗೂ ವಡೋದರಾ ಅಗ್ನಿಶಾಮಕ ತಂಡ ಶೋಧಾ ಕಾರ್ಯಾಚರಣೆ ನಡೆಸುತ್ತಿದೆ.
ಮೃತರು ಸೂರತ್ ನಿಂದ ವಡೋದರಾ ಮತ್ತು ನರ್ಮದಾ ಜಿಲ್ಲೆಗಳ ಗಡಿಯಲ್ಲಿರುವ ಪೊಯಿಚಾಗೆ ಆಗಮಿಸಿದ 17 ಸದಸ್ಯರ ಗುಂಪಿನ ಭಾಗವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97