3:28 PM Wednesday 27 - August 2025

ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ: ಮಾಜಿ ಸೈನಿಕರಾದ ಶಿವಲಿಂಗ ಗೌಡರಿಗೆ ಸನ್ಮಾನ

ambedkar rakshana vedike
15/08/2023

ಸುಳ್ಯ: ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಅರಂತೋಡು ಗ್ರಾಮದ ಕಿರ್ಲಾಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ವಹಿಸಿದ್ದರು. ನಿವೃತ್ತ ಮಾಜಿ ಸೈನಿಕ ಶಿವಲಿಂಗ ಗೌಡ ಧ್ವಜಾರೋಹಣನೆರವೇರಿಸಿ,  ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಮಾಜಿ ಸೈನಿಕರಾದ ಶಿವಲಿಂಗ ಗೌಡರಿಗೆ ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು. ನಂತರ ಅವರು ಮಾತನಾಡಿ, ಇದುವರೆಗೂ ಯಾವುದೇ ಇಲಾಖೆಯವರಾಗಲಿ ಯಾವುದೇ ಸಂಘಟನೆಯವರ ಆಗಲಿ ನನಗೆ ಇದುವರೆಗೆ ಸನ್ಮಾನ ಮಾಡಿಲ್ಲ ಈಗ ನನ್ನನ್ನು ಗುರುತಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆಯವರು ಸನ್ಮಾನಿಸಿದ್ದಾರೆ. ಅವರಿಗೆ ನಾನು ಯಾವಾಗಲೂ ಆಭಾರಿಯಾಗಿರುತ್ತೇನೆ ಎಂದು ಹೇಳಿ ಕಣ್ಣೀರಿಟ್ಟರು.

ಈ ಸಂಘಟನೆಯಲ್ಲಿ ಹಲವಾರು ಒಳ್ಳೆ ಒಳ್ಳೆ ಕೆಲಸಗಳು ಆಗುತ್ತಿದೆ ನೊಂದವರ ಪರವಾಗಿ ನಿಂತು ನ್ಯಾಯ ಕೊಡಿಸುವಂತಹ ಕೆಲಸವನ್ನು ಈ ಸಂಘಟನೆ ಮಾಡಿಕೊಂಡು ಬಂದಿರುತ್ತದೆ ಇನ್ನಷ್ಟು ಒಳ್ಳೆಯ ಕೆಲಸ ಮಾಡಲು ಆ ಭಗವಂತ ಅವರಿಗೆ ಶಕ್ತಿ ಕೊಡಲಿ ಎಂದು ಹೇಳಿದರು.

ಕಿರ್ಲಾಯ ಶಾಲೆಯ ಮುಖ್ಯ ಅಧ್ಯಾಪಕರಾದ ಲೋಲಾಕ್ಷಿ ಮಾತನಾಡಿ, 76ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ನಮ್ಮ ಶಾಲೆಯಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ನಿವೃತ್ತ ಮಾಜಿ ಸೈನಿಕರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಿದ್ದೀರಿ, ಈ ರೀತಿಯ ಕಾರ್ಯಕ್ರಮ ಇದುವರೆಗೂ ಈ ಶಾಲೆಯಲ್ಲಿ ನಡೆದಿಲ್ಲ. ನಮ್ಮ ಶಾಲೆಯಲ್ಲಿ ಅಂಬೇಡ್ಕರ್ ರಕ್ಷಣೆ ವೇದಿಕೆಯವರು ದೊಡ್ಡಮಟ್ಟದಲ್ಲಿ ಶ್ರಮದಾನ ಮಾಡಿದ್ದಾರೆ. ಅವರಿಗೆ ಈ ಶಾಲೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ಮಾತನಾಡಿ, 76ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ನಾವೆಲ್ಲ ಇಂದು ಆಚರಣೆ ಮಾಡುತ್ತಿದ್ದೇವೆ. ನಮ್ಮ ದೇಶಕ್ಕೆ ಹೋರಾಟ ಮಾಡಿ ಸ್ವಾತಂತ್ರ್ಯ ತಂದು ಕೊಟ್ಟಂತ ಹಲವಾರು ಗಣ್ಯರು ಇದ್ದಾರೆ. ಅವರನ್ನು ಮೊದಲು ಸ್ಮರಿಸೋಣ ಮತ್ತು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಬರೆದಂತಹ ಮಹಾನಾಯಕ. ಅವರು ಬರೆದಂತ ಸಂವಿಧಾನದಲ್ಲಿ ಪ್ರತಿಯೊಂದು ಜಾತಿ ಧರ್ಮದವರಿಗೆ ಸವಿಧಾನದಲ್ಲಿ ಹಕ್ಕನ್ನು ಕೊಟ್ಟಂತ ಒಬ್ಬ ಮಹನಾಯಕ. ಎಲ್ಲ ಜಾತಿ ಧರ್ಮದವರು ಸಮಾನಾಗಿದ್ದರೆ ಮಾತ್ರ ಸ್ವಾತಂತ್ರ್ಯ ಸಿಕ್ಕಿದಾಗೆ. ಅದೇ ರೀತಿ ಇಲ್ಲಿಯವರೆಗೂ ಜಾತಿ ತಾರತಮ್ಯದಿಂದ ಮೇಲು–ಕೀಲು ಎಂದು ದಲಿತರನ್ನು ಕೀಳಾಗಿ ನೋಡುತ್ತಾರೆ. ಹಾಗಾದರೆ ದಲಿತರಿಗೆ ಇಲ್ಲಿಯವರೆಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಹೇಳಿದರು.

ಇತ್ತೀಚಿನ ಸುದ್ದಿ

Exit mobile version