5:52 PM Saturday 18 - October 2025

ಮಾವಿನ ಕಾಯಿ ಕೀಳಲು ಮರ ಏರಿದ್ದ ಬಾಲಕ ವಿದ್ಯುತ್ ಸ್ಪರ್ಶಿಸಿ ಸಾವು!

sanjay
25/05/2024

ಮಂಡ್ಯ:  ಮಾವಿನ ಕಾಯಿ ಕೀಳಲು ತೆರಳಿದ್ದ  16 ವರ್ಷ ವಯಸ್ಸಿನ ಬಾಲಕನೋರ್ವ ವಿದ್ಯುತ್ ಆಘಾತಕ್ಕೊಳಗಾಗಿ ಸಾವನ್ನಪ್ಪಿರುವ ದಾರುಣ ಘಟನೆ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ನಡೆದಿದೆ.

ಮಾರಗೌಡನಹಳ್ಳಿಯ ಸಂಜಯ್(16) ಮೃತ ಬಾಲಕ ಎಂದು ಗುರುತಿಸಲಾಘಿದೆ.  ಸಂಜಯ್ ಮಾವಿನ ಕಾಯಿ ಕೀಳಲು ಮರ ಏರಿದ್ದ. ಮರದಲ್ಲಿರುವ ವೇಳೆ ಏಕಾಏಕಿ ವಿದ್ಯುತ್ ತಂತಿ ಸ್ಪರ್ಶಿಸಿದ್ದು, ಬಾಲಕ ಮರದ ಮೇಲೆಯೇ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದ ಸಂಜಯ್ ಕಾಲೇಜಿಗೆ ಹೋಗಲು ಸಜ್ಜಾಗಿದ್ದ. ಆದರೆ ಇದೀಗ ಅನಿರೀಕ್ಷಿತವಾಗಿ ನಡೆದ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.

ಬಾಲಕನ ದಿಢೀರ್ ಸಾವಿನಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.  ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮಾವಿನ ಮರ ಮೇಲೆಯೇ ವಿದ್ಯುತ್ ತಂತಿ ಹಾದು ಹೋಗಿದ್ದು, ಘಟನೆಗೆ ಈ ವಿದ್ಯುತ್ ತಂತಿ ಕಾರಣವಾಗಿದೆ. ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ

Exit mobile version