6:07 PM Wednesday 17 - September 2025

ಒಂಟಿ ವೃದ್ಧೆಯನ್ನು ಹತ್ಯೆ ಮಾಡಿ ಚಿನ್ನದೋಚಿದ್ದ ಪ್ರಕರಣ: ಮೂವರು ಆರೋಪಿಗಳು ಅರೆಸ್ಟ್

arrest
02/06/2023

ಬೆಂಗಳೂರು: ಒಂಟಿಯಾಗಿ ವಾಸವಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿ ಚಿನ್ನ ದೋಚಿದ್ದ ಘಟನೆಗೆ ಸಂಬಂದಿಸಿದಂತೆ ಮೂವರು ಆರೋಪಿಗಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಸಿದ್ದರಾಜು, ಆಶೋಕ್ ಸೇರಿ ಮೂವರು ಬಂಧಿತ ಆರೋಪಿಗಳಾಗಿದ್ದಾರೆ. ಬೆಂಗಳೂರು ನಗರದ ಮಹಾಲಕ್ಷ್ಮಿ ಲೇಔಟ್ ಫೋಸ್ಟ್ ಆಫೀಸ್ ಬಳಿಯ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ 82 ವರ್ಷದ ಕಮಲಮ್ಮ ಎಂಬುವವರನ್ನ ಕೈ ಕಾಲು ಕಟ್ಟಿ ಹಾಕಿ ಮೇ.28ರಂದು ಕೊಲೆ ಮಾಡಿ, ಆರೋಪಿಗಳು ಚಿನ್ನ ದೋಚಿದ್ದರು.

ಆರೋಪಿಗಳ ಪೈಕಿ ಮೂರು ತಿಂಗಳ ಹಿಂದೆ ಪ್ಲಂಬರ್ ಕೆಲಸ ಮಾಡ್ತಿದ್ದ ಸಿದ್ದರಾಜು, ಮೃತ ವೃದ್ದೆ ಮನೆಯಲ್ಲಿ ಕೆಲಸ ಮಾಡಿದ್ದ. ಬಳಿಕ ಮನೆಯಲ್ಲಿ ವೃದ್ದೆ ಒಬ್ಬರೆ ಇದ್ದು, ಅವರ ಬಳಿ ಚಿನ್ನವಿದೆ. ಅದನ್ನ ದೋಚಲು ಯೋಜನೆ ರೂಪಿಸಿದ್ದಾನೆ. ಬಳಿಕ ಈ ವಿಷಯವನ್ನ ಸಿದ್ದರಾಜು ತನ್ನ ಗೆಳೆಯ ಅಶೋಕ್ ಬಳಿ ಪ್ರಸ್ತಾಪ ಮಾಡಿ ಪ್ಲಾನ್ ಮಾಡಿದ್ದರು.

ಕೊಲೆ ನಡೆದ ದಿನ ಎರಡು ಬಾರಿ ವೃದ್ಧೆಯ ಮನೆಯ ಕಡೆಗೆ ಆರೋಪಿಗಳು ಹೋಗಿದ್ದರು. ಸಂಜೆ ನಾಲ್ಕು ಗಂಟೆಗೆ ಮೊದಲ ಬಾರಿಗೆ ಹೋಗಿದ್ದರು. ಒಂದು ಮನೆ ಬಾಡಿಗೆ ಕೊಡುವಂತೆ ಕೇಳಿದ್ದರು. ಆದರೆ ಬಾಡಿಗೆಗೆ ಮನೆ ಇಲ್ಲ ಎಂದು ಅಜ್ಜಿ ಬಾಗಿಲು ತೆರೆದಿರಲಿಲ್ಲ, ಬಳಿಕ ಸಂಜೆ 6 ಗಂಟೆಗೆ ಮತ್ತೆ ಹೋಗಿದ್ದಾರೆ. ಈ ವೇಳೆ ಆಗಲೇ ಬಂದವರು ಎಂಬ ಧೈರ್ಯದಿಂದ ಅಜ್ಜಿ ಬಾಗಿಲು ತೆರೆದಿದ್ದರು. ಈ ವೇಳೆ ಅಜ್ಜಿಯ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿ, ಎರಡು ಚಿನ್ನದ ಸರ ಮತ್ತು ಎರಡು ಬಂಗಾರದ ಬಳೆ ದೋಚಿ ಪರಾರಿಯಾಗಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version