ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕ್ರೈನ್ ಡಿಕ್ಕಿ: ವ್ಯಕ್ತಿ ಸ್ಥಳದಲ್ಲೇ ಸಾವು

ಕಾರ್ಕಳ: ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಕ್ರೈನ್ ಡಿಕ್ಕಿಯಾಗಿದ್ದು, ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಾರ್ಕಳ ನಗರ ಠಾಣೆಯ ವ್ಯಾಪ್ತಿಯ ಅಯ್ಯಪ್ಪ ನಗರದಲ್ಲಿ ನಡೆದಿದೆ.
ಅಂಗಾರ(75) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇವರು ಕುಕ್ಕುಂದೂರು ಅಯ್ಯಪ್ಪ ನಗರದಿಂದ ಕುಕ್ಕುಂದೂರು ಜಲದುರ್ಗದ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಕ್ರೈನ್ ಡಿಕ್ಕಿಯಾಗಿದೆ.
ಕಾರ್ಕಳ ಜೋಡುರಸ್ತೆಯಿಂದ ಅಯ್ಯಪ್ಪ ನಗರದ ಕಡೆಗೆ ಕ್ರೈನ್ ಹೋಗುತ್ತಿತ್ತು. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಂಗಾರ ಅವರಿಗೆ ಹಿಂದಿನಿಂದ ಕ್ರೈನ್ ಡಿಕ್ಕಿಯಾಗಿದೆ. ಘಟನೆ ಸಂಬಂಧ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97