ಪಿಜಿ ಬೇಡ ಎಂದಿದ್ದಕ್ಕೆ ಯುವತಿಯ ಮೇಲೆ ಪಿಜಿ ಮ್ಯಾನೇಜರ್ ಸೇಡು: ಈತ ಮಾಡಿದ ಕೆಲಸ ಕೇಳಿದ್ರೆ ಬೆಚ್ಚಿಬೀಳ್ತೀರಿ!

Anand Sharma
09/07/2024

ಬೆಂಗಳೂರು: ಪಿಜಿ ಬೇಡ ಎಂದಿದ್ದಕ್ಕೆ ಯುವತಿಯೊಬ್ಬಳ ಮೊಬೈಲ್ ನಂಬರ್ ನ್ನು ಪಿಜಿ ಮ್ಯಾನೇಜರ್ ಕಾಲ್ ಗರ್ಲ್ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಿ ತೊಂದರೆ ನೀಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ವಿ ಸ್ಟೇಜ್ ಲೇಡಿಸ್ ಪಿಜಿಯಲ್ಲಿ ನಡೆದಿದೆ.

ಯುವತಿಯೊಬ್ಬಳು ವಿ ಸ್ಟೇಜ್ ಪಿಜಿಗೆ ಅಡ್ಮಿಷನ್ ಆಗಿದ್ದಳು. ಬಳಿಕ ಪಿಜಿ ಇಷ್ಟ ಆಗಿಲ್ಲ ಎಂದು ಅಡ್ಮಿಷನ್ ಕ್ಯಾನ್ಸಲ್ ಮಾಡಿದ್ದಳು ಜೊತೆಗೆ ಗೂಗಲ್ ರಿವ್ಯೂನಲ್ಲಿ ಪಿಜಿಯ ಅವ್ಯವಸ್ಥೆ ಬಗ್ಗೆ ಬರೆದಿದ್ದಳು. ಇದರಿಂದ ಆಕ್ರೋಶಗೊಂಡ ಪಿಜಿ ಮ್ಯಾನೇಜರ್ ಯುವತಿ ನಂಬರ್ ನ್ನು ಕಾಲ್ ಗರ್ಲ್ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದಾನೆ.

ಯುವತಿಗೆ ಹಲವರು ಕರೆ ಮಾಡಿ ರೇಟ್ ಬಗ್ಗೆ ಪ್ರಸ್ತಾಪಿಸಿದ್ದು, ಇದರಿಂದ ಯುವತಿ ಶಾಕ್ ಆಗಿದ್ದಾಳೆ. ಜೊತೆಗೆ ಹಲವರು ಕರೆ ಮಾಡಿ ಟಾರ್ಚರ್ ನೀಡಿದ್ದರು. ಇದರಿಂದ ನೊಂದ ಯುವತಿ ಪೂರ್ವ ವಿಭಾಗ ಸೆನ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾಳೆ.

ಪೊಲೀಸರು ತನಿಖೆ ನಡೆಸಿದಾಗ ಮ್ಯಾನೇಜರ್ ಆನಂದ್ ಶರ್ಮಾ ಎಂಬಾತನ ದುಷ್ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಪಿಜಿ ಮ್ಯಾನೇಜರ್ ಆನಂದ್ ಶರ್ಮಾ ನನ್ನು ಪೊಲೀಸರು ಬಂಧಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version