ಚಾಕೊಲೇಟ್ ಸಿರಪ್ ಬಾಟಲಿಯಲ್ಲಿ ಸತ್ತ ಇಲಿ ಪತ್ತೆ!

hershey
19/06/2024

Zepto ಮೂಲಕ ಆರ್ಡರ್ ಮಾಡಿದ ಹರ್ಷೆಯ ಚಾಕೊಲೇಟ್ ಸಿರಪ್ ಬಾಟಲಿಯಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಪ್ರಮಿ ಶ್ರೀಧರ್ ಯವರು ಚಾಕೊಲೇಟ್ ಸಿರಪ್ ಆರ್ಡರ್ ಮಾಡಿದ ವ್ಯಕ್ತಿಯಾಗಿದ್ದಾರೆ.

Zepto ಮೂಲಕ ಆರ್ಡರ್ ಮಾಡಿದ ಹರ್ಷೆಯ ಚಾಕೊಲೇಟ್ ಸಿರಪ್ ನ ಬಾಟಲಿಯಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ತಕ್ಷಣವೇ  ಅವರು ಅದರ ವೀಡಿಯೊವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಹರ್ಷೆಯ ಬಾಟಲಿಯಲ್ಲಿ ಸತ್ತ ಇಲಿ ಇರುವುದು ತಿಳಿಯುವ ಮೊದಲು ಕುಟುಂಬದ ಮೂವರು ಸದಸ್ಯರು ಈ ಸಿರಪ್ ಅನ್ನು ಕುಡಿದಿದ್ದಾರೆ. ತಕ್ಷಣ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಬಗ್ಗೆ ಪ್ರಮಿ ಇನ್‌ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಪೋಸ್ಟ್‌ ನ ಕೊನೆಯಲ್ಲಿ, ಯಾವುದೇ ಉತ್ಪನ್ನವನ್ನು ಮನೆಯಲ್ಲಿ ಮಕ್ಕಳಿಗೆ ನೀಡುವ ಮೊದಲು ಅದನ್ನು ಪರೀಕ್ಷಿಸಲು ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಕಂಪನಿಯು ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಭರವಸೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಪೋಸ್ಟ್ ಗಮನಿಸಿದ ಹರ್ಷಿಸ್ ಕಂಪೆನಿ ಪ್ರಮಿಯವರ ವಿಡಿಯೋಗೆ ಕಾಮೆಂಟ್ ಮಾಡುವ ಮೂಲಕ ಕ್ಷಮೆಯಾಚನೆ ಮಾಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version