7:04 AM Saturday 20 - December 2025

ಟೀ ಮಾರಾಟಗಾರ ಮತ್ತು ಮೂವರು ಅಪ್ರಾಪ್ತರಿಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ!

crime news
07/01/2024

ನವದೆಹಲಿ: 12 ವರ್ಷ ವಯಸ್ಸಿನ ಬಾಲಕಿಯ ಮೇಲೆ ಟೀ ಮಾರಾಟಗಾರ ಹಾಗೂ ಮೂವರು ಅಪ್ರಾಪ್ತ ವಯಸ್ಸಿನ ಬಾಲಕರು ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ದೆಹಲಿಯ ಸದಾರ್ ಬಜಾರ್ ನಲ್ಲಿ ನಡೆದಿದೆ.

ಟೀ ಅಂಗಡಿಗೆ ಗ್ರಾಹಕಿಯಾಗಿ ಬರುತ್ತಿದ್ದ ಮಹಿಳೆಯೊಬ್ಬಳಿಗೆ ಟೀ ಮಾರಾಟಗಾರ, ಹೊಸ ವರ್ಷ ಪಾರ್ಟಿಗೆ ಓರ್ವಳು ಯುವತಿಯನ್ನು ಕರೆತರಲು ಹೇಳಿದ್ದ. ಹಣದ ಆಸೆಗೆ ಬಿದ್ದ ಮಹಿಳೆ ಚಿಂದಿ ಆಯುವ ಬಾಲಕಿಯ ಬಳಿ ಖುರ್ಷಿದ್ ಮಾರ್ಕೆಟ್ನ ಕಟ್ಟಡದ ಛಾವಣಿಯಿಂದ ಕಸ ಸಂಗ್ರಹಿಸಲು ಹೇಳಿದ್ದಳು.

ಹುಡುಗಿ ಕಸಸಂಗ್ರಹಿಸಲೆಂದು ಆ ಪ್ರದೇಶಕ್ಕೆ ತೆರಳಿದಾಗ ಅಲ್ಲಿ ಕಾಯುತ್ತಿದ್ದ ನಾಲ್ವರು ಆರೋಪಿಗಳು ಪಾರ್ಟಿ ಮಾಡಲು ತಯಾರಿಸಿದ್ದ ತಾತ್ಕಾಲಿಕ ಟೆಂಟ್ ನೊಳಗೆ ಕರೆದೊಯ್ದು ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರು ಸೇರಿದಂತೆ ಎಲ್ಲಾ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿರುವ ವಿಚಾರವನ್ನು ಸಂತ್ರಸ್ತ ಬಾಲಕಿ ತನ್ನ ಸಹೋದರ ಸಂಬಂಧಿ ಬಳಿ ಹೇಳಿಕೊಂಡಿದ್ದರಿಂದಾಗಿ ಈ ಪ್ರಕರಣ ಬಯಲಿಗೆ ಬಂದಿದೆ. ಸದ್ಯ ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ಸುದ್ದಿ

Exit mobile version